Select Your Language

Notifications

webdunia
webdunia
webdunia
webdunia

ಕೊವಿಡ್ ನಿಯಂತ್ರಣದ ಬಗ್ಗೆ ಸರ್ಕಾರ ಕ್ರಮ

ಕೊವಿಡ್ ನಿಯಂತ್ರಣದ ಬಗ್ಗೆ ಸರ್ಕಾರ  ಕ್ರಮ
bangalore , ಬುಧವಾರ, 21 ಡಿಸೆಂಬರ್ 2022 (14:51 IST)
ಚೀನಾದಲ್ಲಿ ಮತ್ತೆ ಕೋವಿಡ್ ಸೋಂಕು ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಭಾರತ ಸರ್ಕಾರವು ಕೂಡ ಹಲವುಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ. ಕಣ್ಗಾವಲಿಗೆ ವಿಶೇಷ ಸಮಿತಿ ರಚಿಸಿದ್ದು, ಒಂದಷ್ಟು ವಿಚಾರಗಳ ಕುರಿತು ಇಂದು ಚರ್ಚೆ ನಡೆಯಲಿದೆ. ವಿದೇಶ ಪ್ರಯಾಣಕ್ಕೆ ಸಂಬಂಧಿಸಿದಂತೆ ನಿರ್ಬಂಧ ಘೋಷಿಸುವ ಸಾಧ್ಯತೆ ಇದೆ ಹಾಗೆಯೇ ವಿದೇಶದಿಂದ ಬರುವವರಿಗೆ ಮತ್ತೆ ಒಂದಿಷ್ಟು ಶಿಷ್ಟಾಚಾರಗಳನ್ನು ಘೋಷಿಸುವ ಕುರಿತು ಚರ್ಚೆ ನಡೆಯಲಿದೆ ಎನ್ನಲಾಗಿದೆ. ಪರಿಶೀಲನಾ ಸಭೆಯಲ್ಲಿ ಪ್ರಾಥಮಿಕವಾಗಿ ಆರು ಪ್ರಮುಖ ಅಂಶಗಳ ಕುರಿತು ಚರ್ಚೆ ನಡೆಸಲಾಗುವುದು ಎಂದು ಆರೋಗ್ಯ ಸಚಿವಾಲಯದ ಮೂಲಗಳು ತಿಳಿಸಿವೆ. ಅಂತಾರಾರಾಷ್ಟ್ರೀಯ ಮತ್ತು ದೇಶೀಯ ವಿಮಾನ ನಿಲ್ದಾಣಗಳಲ್ಲಿ ಒಳಬರುವ ಪ್ರಕರಣಗಳನ್ನು ನಿರ್ಬಂಧಿಸುವ ತಂತ್ರ, ವಿದೇಶದಿಂದ ಪ್ರಯಾಣಿಸುವ ಪ್ರಯಾಣಿಕರಿಗೆ ಮಾರ್ಗಸೂಚಿಗಳನ್ನು ಹಾಕುವುದು ಮತ್ತು ಕೋವಿಡ್‌ನ ಹೊಸ ರೂಪಾಂತರದ ಕುರಿತು ತಜ್ಞರೊಂದಿಗೆ ಸಮಾಲೋಚನೆಯನ್ನು ಒಳಗೊಂಡಿರುತ್ತದೆ.ವಿದೇಶದಿಂದ ಹಿಂದಿರುಗುವ ಭಾರತೀಯ ಪ್ರಯಾಣಿಕರು, ಪ್ರಸ್ತುತ ದೇಶದಲ್ಲಿರುವ ಕೋವಿಡ್ ತಳಿಗಳು ಮತ್ತು ಮುಂಬರುವ ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಸೋಂಕು ಹರಡದಂತೆ ತಡೆಗಟ್ಟುವ ಪ್ರೋಟೋಕಾಲ್‌ಗಳ ಬಗ್ಗೆಯೂ ಚರ್ಚಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಕರ್ನಾಟಕದಲ್ಲಿ ಝಿಕಾ ವೈರಸ್ ಭೀತಿ!