Select Your Language

Notifications

webdunia
webdunia
webdunia
webdunia

ಹುಲಿಗೆಮ್ಮ ದೇವಿ ದರ್ಶನ ಪಡೆದ ರೆಡ್ಡಿ

Reddy who had darshan of Huligemma Devi
ಗಂಗಾವತಿ , ಬುಧವಾರ, 21 ಡಿಸೆಂಬರ್ 2022 (20:08 IST)
ಜನಾರ್ದನ ರೆಡ್ಡಿ ತಮ್ಮ ರಾಜಕೀಯ ಜೀವನದ ಎರಡನೇ ಇನ್ನಿಂಗ್ಸ್ ಆರಂಭಿಸಲು ಸಕಲ ಸಿದ್ಧತೆಯನ್ನ ಮಾಡಿಕೊಂಡಿದ್ದಾರೆ. ಆದರೆ ಅವರು ಯಾವ ಪಕ್ಷದ ಪರವಾಗಿ, ಯಾವ ಕ್ಷೇತ್ರದಲ್ಲಿ ನಿಲ್ಲುತ್ತಾರೆ ಎಂಬ ಮಾಹಿತಿಯನ್ನ ಇನ್ನೂ ಬಿಟ್ಟುಕೊಟ್ಟಿಲ್ಲ. ಇದರ ಬೆನ್ನಲ್ಲೇ ಮಾಜಿ ಸಚಿವ ಜನಾರ್ದನ ರೆಡ್ಡಿ ಕೊಪ್ಪಳ ತಾಲೂಕಿನಲ್ಲಿರುವ ಆರಾಧ್ಯ ದೇವತೆ ಹುಲಿಗೆಮ್ಮ ದೇವಿಯ ದರ್ಶನ ಪಡೆದಿದ್ದಾರೆ. ಜನಾರ್ದನ ರೆಡ್ಡಿಗೆ ಆಪ್ತರು ಸಾಥ್ ನೀಡಿದ್ರು. ಕಳೆದ ಕೆಲ ದಿನಗಳ ಹಿಂದಷ್ಟೇ ಕೊಪ್ಪಳದ ಗಂಗಾವತಿ ತಾಲೂಕಿನ ಆನೆಗುಂದಿಯ ಬಳಿಯ ಅಂಜನಾದ್ರಿಗೆ ಭೇಟಿ ನೀಡಿ, ಆಂಜನೇಯನ ದರ್ಶನ ಪಡೆದಿದ್ದ ರೆಡ್ಡಿ ನಾಳೆ ಗಂಗಾವತಿಯಲ್ಲಿ ನಡೆಯಲಿರುವ ದುರ್ಗಾದೇವಿ ಜಾತ್ರೆ ಮಹೋತ್ಸವ ಕಾರ್ಯಕ್ರಮದಲ್ಲಿ ಜನಾರ್ದನ ರೆಡ್ಡಿ ಭಾಗಿಯಾಗಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನರಹಂತಕ ಹೇಳಿಕೆ; ಬಿಜೆಪಿ ಪ್ರೊಟೆಸ್ಟ್