Select Your Language

Notifications

webdunia
webdunia
webdunia
webdunia

ಜಾಗ ಸರ್ವೇಗೆ ಬಂದ ಅಧಿಕಾರಿಗಳ ಎದುರು ದೈವ ಮೈಮೇಲೆ ಬಂದ ಹಾಗೇ ವರ್ತಿಸಿದ ವ್ಯಕ್ತಿ

Chikkamagaluru Landn Dispute

Sampriya

ಚಿಕ್ಕಮಗಳೂರು , ಗುರುವಾರ, 6 ನವೆಂಬರ್ 2025 (15:27 IST)
Photo Credit X
ಚಿಕ್ಕಮಗಳೂರು: ಜಾಗದ ಸರ್ವೆ ಮಾಡಲು ಬಂದವರ ಎದುರು ದೈವ ಬಂದಂತೆ ಬೆಂಕಿ ಹಿಡಿದು ನರ್ತಿಸಿದ ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆ ಕೊಪ್ಪ ತಾಲ್ಲೂಕಿನ ಚಿಕ್ಕನಗುಂಡಿಯಲ್ಲಿ ನಡೆದಿದೆ ಎನ್ನಲಾಗಿದೆ. 

ಗ್ರಾಮದ ಸುರೇಶ್ ಹಾಗೂ ಅವರ ಅಣ್ಣ-ತಮ್ಮಂದಿರ ನಡುವೆ ಜಾಗದ ವ್ಯಾಜ್ಯ ಇತ್ತು. ಈ ಸಂಬಂಧ ಅಧಿಕಾರಿಗಳು ಸರ್ವೇ ನಡೆಸಲು ಜಾಗಕ್ಕೆ ಬಂದಿದ್ದಾರೆ. ಈ ಸಂದರ್ಭದಲ್ಲಿ ಸುರೇಶ್‌, ದೈವ ನರ್ತಕನ ರೀತಿ ಕೈಯಲ್ಲಿ ಬೆಂಕಿ ಹಿಡಿದು ತೋಟದಲ್ಲಿ ಎದುರು ಬಂದಿದ್ದಾನೆ. 

 ಇದರಿಂದ ಅಧಿಕಾರಿಗಳು ಶಾಕ್ ಆಗಿದ್ದಾರೆ. ಅಲ್ಲೇ ಇದ್ದ ವ್ಯಕ್ತಿಗಳನ್ನು ಇದನ್ನು ವಿಡಿಯೋ ಮಾಡಿದ್ದಾರೆ. 

ತಮ್ಮನ ಹೆಂಡತಿ ರಮ್ಯಾ ಅವರ ಮೇಲೆ ಈ ವೇಳೆ ಸುರೇಶ್ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಕೊಪ್ಪ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಂಕಷ್ಟದಲ್ಲಿರುವ ರೈತರಿಗೆ ಬಿಡಿಗಾಸನ್ನೂ ನೀಡದ ಸಿದ್ದರಾಮಯ್ಯರ ಸರಕಾರ: ಬಿ.ವೈ.ವಿಜಯೇಂದ್ರ