Photo Credit: ಉಡುಪಿಯ ಕಂಡೀರಾ
ಮಂಗಳೂರು: ನವಂಬರ್ 28 ಕ್ಕೆ ಪ್ರಧಾನಿ ಮೋದಿ ಉಡುಪಿಗೆ ಬರುತ್ತಿದ್ದಾರೆ. ಆದರೆ ಅದಕ್ಕೆ ಮೊದಲೇ ಬಂದು ಬಿಟ್ಟರಾ ಎಂದು ನಿಮಗೆ ಈ ಫೋಟೋ ನೋಡಿದರೆ ಅಚ್ಚರಿಯಾಗಬಹುದು. ಆದರೆ ಅದರ ಹಿಂದಿನ ರಿಯಲ್ ಸ್ಟೋರಿ ಇಲ್ಲಿದೆ ನೋಡಿ.
ಕರಾವಳಿ ಭಾಗದ ಜನಪ್ರಿಯ ಯೂಟ್ಯೂಬ್ ಚಾನೆಲ್ ಉಡುಪಿಯ ಕಂಡೀರಾ ತನ್ನ ಸೋಷಿಯಲ್ ಮೀಡಿಯಾದಲ್ಲಿ ಫೋಟೋವೊಂದನ್ನು ಹಂಚಿಕೊಂಡಿದೆ. ಈ ಫೋಟೋದಲ್ಲಿ ಮೋದಿಯನ್ನೇ ಹೋಲುವ ವ್ಯಕ್ತಿಯನ್ನು ನೋಡಬಹುದಾಗಿದೆ.
ಉಡುಪಿ ಕೃಷ್ಣ ಸನ್ನಿಧಿಯಲ್ಲಿ ಥೇಟ್ ಮೋದಿಯಂತೇ ಕಾಣುವ ವ್ಯಕ್ತಿ ಕಂಡುಬಂದಿದ್ದಾರೆ. ಅವರ ಫೋಟೋವನ್ನು ಲಕ್ಷ್ಮೀ ನಾರಾಯಣ ಉಪಾಧ್ಯ ಎನ್ನುವವರು ಸೆರೆ ಹಿಡಿದಿದ್ದಾರಂತೆ. ಇದನ್ನು ಉಡುಪಿಯ ಕಂಡೀರಾ ಫೇಸ್ ಬುಕ್ ತಾಣದಲ್ಲಿ ಪ್ರಕಟಿಸಲಾಗಿದೆ.
ಅಸಲಿಗೆ ಇವರು ಮೋದಿಯಲ್ಲ. ಮೋದಿಯಂತೇ ಕಾಣುವ ಉಡುಪಿಯವರೇ ಆದ ಸದಾನಂದ ನಾಯಕ್ ಎಂದು ಚಾನೆಲ್ ಮಾಹಿತಿ ನೀಡಿದೆ. ಆದರೆ ಮೋದಿಯಂತೇ ಕಾಣುವ ಕಾರಣ ಅನೇಕರು ದೇವಸ್ಥಾನದಲ್ಲಿ ಅವರ ಜೊತೆ ಸೆಲ್ಫೀ ತೆಗೆಸಿಕೊಂಡು ಖುಷಿಪಟ್ಟಿದ್ದಾರೆ.