Publish Date: Mon, 03 Oct 2022 (20:44 IST)
Updated Date: Mon, 03 Oct 2022 (20:49 IST)
ಆಂಧ್ರಪ್ರದೇಶದಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಮಹಿಳೆಯ ಮೇಲೆ ಮಹಿಳಾ ಪೊಲೀಸ್ ಒರ್ವಳು ದರ್ಪ ತೋರಿದ್ದಾಳೆ. ಆಂಧ್ರಪ್ರದೇಶದ ಶ್ರೀ ಕಾಳಹಸ್ತಿಯಲ್ಲಿ ಸಮಯ ಮೀರಿದರೂ ಅಂಗಡಿ ಬಾಗಿಲು ಮುಚ್ಚಿಲ್ಲ, ಅಂಗಡಿ ಕ್ಲೋಸ್ ಮಾಡುವಂತೆ ಹೇಳಿದ್ದಾಳೆ. ನಂತರ ಮಹಿಳೆಗೆ ಪೊಲೀಸ್ ಅಧಿಕಾರಿ ಅಂಗಡಿ ಬಾಗಿಲು ಹಾಕಿ ತಮ್ಮ ವಾಹನ ಏರುವಂತೆ ಹೇಳಿದ್ದಾಳೆ. ಇದಕ್ಕೊಪ್ಪದ ಮಹಿಳೆ ತನಗೆ ಇತ್ತೀಚೆಗೆ ಸರ್ಜರಿ ಆಗಿದೆ. ನಾನು ಬರಲು ಸಾಧ್ಯವಿಲ್ಲ ಎಂದಿದ್ದಾಳೆ. ಆಕ್ರೋಶಗೊಂಡ ಪೊಲೀಸ್ ಅಧಿಕಾರಿ ಆಕೆಯನ್ನು ಬಲವಂತದಿಂದ ಪೊಲೀಸ್ ವಾಹನ ಹತ್ತಿಸಲು ಪ್ರಯತ್ನಸಿದ್ದಾಳೆ. ಆದ್ರೆ ಮಹಿಳೆ ಇದಕ್ಕೆ ಒಪ್ಪದಿದ್ದಾಗ ಆಕೆ ಮೇಲೆ ಹಲ್ಲೆ ಮಾಡಿ ಆಕೆಯನ್ನು ವಾಹನಕ್ಕೆ ಹತ್ತಿಸಿದ್ದಾಳೆ. ನನಗೆ ಇತ್ತೀಚೆಗೆ ಒಂದು ಸರ್ಜರಿಯಾಗಿದ್ದು, ನಾನು ಅತೀವನೋವಿನಿಂದ ಕೂಡಿದ್ದೇ. ನನಗೆ ಸರ್ಜರಿ ಆಗಿದೆ ನಾನು ಸ್ಟೇಷನ್ ಬರಲು ಸಾಧ್ಯವಿಲ್ಲ ಎಂದ್ರೂ ಸಹ ಕೇಳದೆ, ಆಕೆಯ ಮೇಲೆ ಹಲ್ಲೆ ಮಾಡಿ ಬಲವಂತದಿಂದ ಸ್ಟೇಷನ್ಗೆ ಕರೆತರಲಾಗಿದೆ. ಸಂಬಂಧಿಕರ ಸಹಾಯದ ನಂತರ ಈಕೆ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದು, ಪೊಲೀಸ್ ತನ್ನನ್ನು ಅಮಾನುಷವಾಗಿ ನಡೆದ ರೀತಿಯನ್ನು ಹೇಳಿಕೊಂಡಿದ್ದಾರೆ.