Publish Date: Mon, 03 Oct 2022 (19:14 IST)
Updated Date: Mon, 03 Oct 2022 (19:17 IST)
ನಿಧಿ ಆಸೆಗಾಗಿ ವ್ಯಕ್ತಿಯೋರ್ವನನ್ನು ಕೊಲೆ ಮಾಡಿರುವ ಘಟನೆ ತಮಿಳುನಾಡಿನ ಕೃಷ್ಣಗಿರಿಯಲ್ಲಿ ನಡೆದಿದೆ.
ರೈತ ಲಕ್ಷ್ಮಣನ್ (52) ಕೊಲೆಯಾದ ವ್ಯಕ್ತಿ. ಇವರು ತೆಂಕಣಿಕೋಟೈ ತಾಲೂಕಿನ ಕೆಳಮಂಗಲ ಸಮೀಪದ ಪುದೂರು ಗ್ರಾಮದವರು. ನಾಲ್ಕು ವರ್ಷಗಳ ಹಿಂದೆ ಅವರ ಪತ್ನಿ ಲಕ್ಷ್ಮಿ ಮೃತಪಟ್ಟಿದ್ದರು. ಇವರಿಗೆ ನಾಗರಾಜ್, ಶಿವಕುಮಾರ್ ಮತ್ತು ಠಾಣಲಕ್ಷ್ಮಿ ಎಂಬ ಮೂವರು ಮಕ್ಕಳಿದ್ದಾರೆ.
ಲಕ್ಷ್ಮಣನ್ ಮನೆಯ ಸಮೀಪದ ಅಡಿಕೆ ತೋಟದಲ್ಲಿ ಅವರ ಶವ ನಿಗೂಢವಾಗಿ ಪತ್ತೆಯಾಗಿತ್ತು. ಆ ಸ್ಥಳದಲ್ಲಿ ವೀಳ್ಯದೆಲೆ, ನಿಂಬೆಹಣ್ಣು, ಅರಿಶಿನ, ಕುಂಕುಮ, ಕೋಳಿ, ಗುದ್ದಲಿ ಸೇರಿದಂತೆ ಪೂಜಾ ಸಾಮಗ್ರಿಗಳಿದ್ದವು. ಈ ಕುರಿತು ಕೆಳಮಂಗಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಲಕ್ಷ್ಮಣ್ ಅವರ ಮೃತದೇಹವನ್ನು ತೆಂಕಣಿಕೋಟೈ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದರು. ಬಳಿಕ ಪೊಲೀಸರು ತನಿಖೆ ನಡೆಸಿದ್ದು, ಧರ್ಮಪುರಿ ಮೂಲದ ವಾಚ್‌ಮನ್ ಮಣಿ (65) ಲಕ್ಷ್ಮಣನ್ ಅವರನ್ನು ಕೊಲೆ ಮಾಡಿರುವುದು ತಿಳಿದುಬಂದಿತ್ತು.