ಅಮಿತ್ ಶಾ ಕಾಶ್ಮೀರ ಭೇಟಿ ಬೆನ್ನಲ್ಲೇ ಶಾಕಿಂಗ್ ನ್ಯೂಸ್ ಒಂದು ಬಹಿರಂಗವಾಗಿದೆ. ಇತ್ತೀಚೆಗೆ ಜಮ್ಮುವಿನ ಉಧಮ್‌ಪುರ್‌ನಲ್ಲಿ ನಡೆದ ಅವಳಿ ಸ್ಫೋಟಕ್ಕೂ ಅಮಿತ್ ಶಾ ಭೇಟಿಗೂ ನಂಟಿತ್ತು ಅಂತ ಆರೋಪಿಗಳು ವಿಚಾರಣೆ ವೇಳೆ ಬಾಯ್ಬಿಟ್ಟಾದ್ದಾರೆ ಅಂತ ಪೋಲಿಸರು ಹೇಳಿದ್ದಾರೆ.
ಅಲ್ಲಿ ನಿಂತಿದ್ದ ಬಸ್‌ಗಳಲ್ಲಿ ಎರಡು ಬಾರಿ ಸ್ಫೋಟ ನಡೆದಿತ್ತು. ಆ ತನಿಖೆಯನ್ನ ಕೈಗೆತ್ತಿಕೊಂಡಿದ್ದ ಜಮ್ಮು ಪೋಲಿಸರು ಇಬ್ಬರನ್ನ ಬಂಧಿಸಿದ್ರು. ಜೊತೆಗೆ ಎರಡು ಐಇಡಿ ಸ್ಫೋಟಕಗಳು ಮತ್ತು ಮೂರು ಸ್ಟಿಕಿ ಸ್ಫೋಟಕಗಳನ್ನ ವಶಪಡಿಸಿಕೊಂಡಿದ್ರು. ಇನ್ನು ಆರೋಪಿಗಳನ್ನ ವಿಚಾರಿಸಿದಾಗ ಡ್ರೋನ್ ಮೂಲಕ ಈ ಸ್ಪೋಟಕಗಳನ್ನ ಪಾಕ್‌ನಿಂದ ತರಿಸಿಕೊಳ್ಳಲಾಗಿದ್ದು, ಲಷ್ಕರ್ ಉಗ್ರ ಸಂಘಟನೆಯ ನಂಟು ಕೂಡ ಇರೋದಾಗಿ ಹೇಳಿದ್ದಾರೆ ಎನ್ನಲಾಗಿದೆ. ಜೊತೆಗೆ ಗಣ್ಯ ವ್ಯಕ್ತಿಯೊಬ್ರು ಅಂದ್ರೆ ಕ್ಯಾಬಿನೆಟ್ ಮಂತ್ರಿಯೊಬ್ರು ಈ ಪ್ರದೇಶಕ್ಕೆ ಭೇಟಿ ನೀಡ್ತಾ ಇರೋದ್ರಿಂದ ಅದಕ್ಕೆ ಡಿಸ್ಟರ್ಬ್ ಮಾಡ್ಬೇಕು ಅಂತ ಈ ಕೃತ್ಯಗಳನ್ನ ಯೋಜಿಸಲಾಗಿತ್ತು ಅಂತ ಹೇಳಿದ್ದಾರೆ. ಅಂದ್ಹಾಗೆ ಕಾಶ್ಮೀರದ ಬರಮುಲ್ಲಾದಲ್ಲಿ ರ್ಯಾಲಿಯೊಂದ್ರಲ್ಲಿ ಭಾಗವಹಿಸಲು ಅಮಿತ್ ಶಾ ನಾಳೆ ಅಲ್ಲಿಗೆ ಭೇಟಿ ನೀಡಲಿದ್ದು ಮೂರು ದಿನಗಳ ಕಾಲ ಜಮ್ಮುಕಾಶ್ಮೀರದಲ್ಲಿಯೇ ಇರಲಿದ್ದಾರೆ.