Publish Date: Mon, 03 Oct 2022 (09:55 IST)
Updated Date: Mon, 03 Oct 2022 (08:24 IST)
ನವದೆಹಲಿ : 6 ವರ್ಷದ ಬಾಲಕನ ಕತ್ತು ಸೀಳಿ ನರಬಲಿ ನೀಡಿರುವ ಘಟನೆ ದಕ್ಷಿಣ ದೆಹಲಿಯ ಲೋಧಿ ಕಾಲೊನಿಯಲ್ಲಿ ನಡೆದಿದ್ದು, ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಿಹಾರ ಮೂಲದ ವಿಜಯ್ ಕುಮಾರ್, ಅಮರ್ ಕುಮಾರ್ ಬಂಧಿತ ಆರೋಪಿಗಳು. ಆರೋಪಿಗಳು ಮತ್ತು ಬಾಲಕನ ಪೋಷಕರು ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಒಂದೇ ಕೊಳೆಗೇರಿಯಲ್ಲಿ ವಾಸವಾಗಿದ್ದರು.
ವಿಜಯ್ ಮತ್ತು ಅಮರ್ ಅಪರಾಧ ಎಸಗುವಾಗ ಮಾದಕ ವಸ್ತು ಸೇವಿಸಿದ್ದರು. ಪ್ರಸಾದ ಸೇವಿಸಿದ ಬಳಿಕ ಶ್ರೇಯಸ್ಸಾಗಲು ಹುಡುಗನನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.