Publish Date: Tue, 27 Sep 2022 (11:58 IST)
Updated Date: Tue, 27 Sep 2022 (11:48 IST)
ನವದೆಹಲಿ : ಪರಿಚಿತನೊಬ್ಬ ಪ್ರತಿನಿತ್ಯ ಕುಡಿದು ಬಂದು ಗಗನಸಖಿ ಮೇಲೆ ಆಕೆಯ ಮನೆಯಲ್ಲಿ ಅತ್ಯಾಚಾರವೆಸಗಿದ ಘಟನೆ ದಕ್ಷಿಣ ದೆಹಲಿಯ ಮೆಹ್ರೌಲಿ ಪ್ರದೇಶದಲ್ಲಿ ನಡೆದಿದೆ.
ದೆಹಲಿಯಲ್ಲಿ 30 ವರ್ಷದ ಮಹಿಳೆಯ ಮೇಲೆ ಹರ್ಜಿತ್ ಯಾದವ್ ಖಾನ್ಪುರ್ ಎಂಬಾತ ಕಳೆದ ಒಂದೂವರೆ ತಿಂಗಳಿಂದ ಕುಡಿದ ಸ್ಥಿತಿಯಲ್ಲಿ ಆಕೆಯ ಮನೆಗೆ ಬಂದು ಅತ್ಯಾಚಾರ ಎಸಗುತ್ತಿದ್ದನು. ಈತ ರಾಜಕೀಯ ಪಕ್ಷದ ಬ್ಲಾಕ್ ಅಧ್ಯಕ್ಷನಾಗಿದ್ದಾನೆ.
ಘಟನೆಗೆ ಸಂಬಂಧಿಸಿ ಗಗನ ಸಖಿಯು ಹರ್ಜೀತ್ ಯಾದವ್ನನ್ನು ಕೊಣೆಯಲ್ಲಿ ಕೂಡಿ ಹಾಕಿ, ನಂತರ ಪೊಲೀಸರಿಗೆ ಕರೆ ಮಾಡಿದ್ದಾಳೆ.