ರಾಂಚಿ : ಪತಿಯ ಎದುರೇ ಮಹಿಳೆಯ ಮೇಲೆ 6 ಮಂದಿ ಸಾಮೂಹಿಕ ಅತ್ಯಾಚಾರವೆಸಗಿದ ಘಟನೆ ಜಾರ್ಖಂಡ್ದಲ್ಲಿ ನಡೆದಿದೆ.
ಜಾರ್ಖಂಡ್ನ ಪಲಾಮು ಜಿಲ್ಲೆಯಲ್ಲಿ 22 ವರ್ಷದ ಮಹಿಳೆಯು ತನ್ನ ಅತ್ತೆಯ ಮನೆಯಲ್ಲಿ ಜಗಳವಾಡಿ ಕಾಲ್ನಡಿಗೆ ಮೂಲಕ ಪಕ್ಕದ ಊರಲ್ಲಿರುವ ತಂದೆ ಮನೆಗೆ ಹೋಗುತ್ತಿದ್ದಳು.
ಈ ಹಿನ್ನೆಲೆಯಲ್ಲಿ ಮಹಿಳೆಯನ್ನು ಹುಡುಕುತ್ತಾ ಆಕೆಯ ಪತಿ ಹಾಗೂ ಅವರ ಸಂಬಂಧಿ ಬೈಕ್ನಲ್ಲಿ ಹೊರಟರು. ಈ ವೇಳೆ ಆ ಮಹಿಳೆ ರಸ್ತೆಯಲ್ಲಿ ಸಿಕ್ಕಿದ್ದಾಳೆ.
ಇದರಿಂದಾಗಿ ಆಕೆಯ ಪತಿ ಮನವೊಲಿಸಿ ಮನೆಗೆ ಕರೆದುಕೊಂಡು ಹೋಗಲು ಪ್ರಯತ್ನಿಸಿದ್ದಾರೆ. ಆದರೆ ಅದೇ ವೇಳೆ ಬಂದ 6 ಜನರು ಮಹಿಳೆಯ ಪತಿ ಹಾಗೂ ಆಕೆಯ ಸಂಬಂಧಿಯನ್ನು ಥಳಿಸಿ, ಆಕೆಯ ಮೇಲೆ ಅತ್ಯಾಚಾರವೆಸಗಿದರು.
ಜೊತೆಗೆ ತೀವ್ರ ಗಾಯಗೊಂಡ ಸಂಬಂಧಿಯನ್ನು ಹಾಗೂ ಮಹಿಳೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿ ಮಹಿಳೆಯ ಪತಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.