Select Your Language

Notifications

webdunia
webdunia
webdunia
webdunia

ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ !

ಸಾಮೂಹಿಕ ಅತ್ಯಾಚಾರ
ಮುಂಬೈ : 11 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಆಕೆಯ ಸ್ನೇಹಿತೆಯೇ ಅತ್ಯಾಚಾರವೆಸಗುವಂತೆ ಸೂಚಿಸಿದ್ದರಿಂದ ಮೂವರು ವ್ಯಕ್ತಿಗಳು ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಮುಂಬೈನ ವಿರಾರ್ (ಪಶ್ಚಿಮ) ಪ್ರದೇಶದಲ್ಲಿ ನಡೆದಿದೆ.

ಕೇವಲ ಆರು ಗಂಟೆಗಳ ಒಳಗೆ ಮೂವರು ಆರೋಪಿಗಳು ಸೇರಿದಂತೆ 21 ವರ್ಷದ ಯುವತಿಯನ್ನು ಪೊಲೀಸರು ಇದೀಗ ಬಂಧಿಸಿದ್ದು, ಆಗಸ್ಟ್ 16ರ ಮಂಗಳವಾರದಂದು ಸಂಜೆ 7 ಗಂಟೆಗೆ ಸಂತ್ರಸ್ತೆ ತನ್ನ ಸೆಲ್ ಫೋನ್ ರಿಪೇರಿ ಮಾಡಿಸಿಕೊಳ್ಳಲು ತನ್ನ ಮನೆಯ ಸಮೀಪವಿರುವ ಅಂಗಡಿಗೆ ಹೋದಾಗ ಈ ಘಟನೆ ನಡೆದಿದೆ.

ಮೊಬೈಲ್ ಅಂಗಡಿಗೆ ಹೋಗಿದ್ದ ಬಾಲಕಿ, ಯುವತಿಯನ್ನು ಭೇಟಿಯಾದಾಗ ಆಟ ಆಡಲು ಆಕೆಯನ್ನು ಕರೆದೊಯ್ದಿದ್ದಾಳೆ. ನಂತರ ಬಾಲಕಿಯನ್ನು ಪ್ರತ್ಯೇಕೆ ಸ್ಥಳಕ್ಕೆ ಕರೆದೊಯ್ದು ತನ್ನ ಮೂವರು ಗೆಳೆಯರನ್ನು ಕರೆಸಿದಳು. ಮಧ್ಯರಾತ್ರಿ ಸ್ಥಳಕ್ಕೆ ಬಂದ ಆರೋಪಿಗಳನ್ನು ಬಾಲಕಿಯನ್ನು ಎಳೆದೊಯ್ದಿದ್ದಾರೆ. 

ನಂತರ ಬಾಲಕಿಗೆ ಬೆದರಿಕೆ ಹಾಕಿ ಸ್ನೇಹಿತೆ ಒಬ್ಬನೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಹೇಳಿದ್ದಾಳೆ. ಅದರಂತೆ ಇಬ್ಬರು ವ್ಯಕ್ತಿಗಳು ಒಬ್ಬರ ನಂತರ ಮತ್ತೊಬ್ಬರು ಬಾಲಕಿ ಮೇಲೆ ಅತ್ಯಾಚಾರ ನಡೆಸಿ, ಕಿರುಕುಳ ನೀಡಿದ್ದಾರೆ. ಈ ಎಲ್ಲವನ್ನು ಸಂತ್ರಸ್ತೆ ಸ್ನೇಹಿತೆ ಅಲ್ಲಿಯೇ ಇದ್ದುಕೊಂಡು ಸುಮ್ಮನೆ ನೋಡಿದ್ದಾಳೆ.


Share this Story:

Follow Webdunia kannada

ಮುಂದಿನ ಸುದ್ದಿ

ಐಫೋನ್ ಗಳಿಗೆ ಹ್ಯಾಕರ್‌ಗಳ ಭೀತಿ ಎಚ್ಚರ!