Select Your Language

Notifications

webdunia
webdunia
webdunia
webdunia

ವಿದೇಶೀ ಲೀಗ್ ಗಳ ಫ್ರಾಂಚೈಸಿ ಹೆಸರು ಪ್ರಕಟಿಸಿದ ಮುಂಬೈ ಇಂಡಿಯನ್ಸ್

ವಿದೇಶೀ ಲೀಗ್ ಗಳ ಫ್ರಾಂಚೈಸಿ ಹೆಸರು ಪ್ರಕಟಿಸಿದ ಮುಂಬೈ ಇಂಡಿಯನ್ಸ್
ಮುಂಬೈ , ಬುಧವಾರ, 10 ಆಗಸ್ಟ್ 2022 (16:02 IST)
ಮುಂಬೈ: ಐಪಿಎಲ್ ಫ್ರಾಂಚೈಸಿ ರಿಲಯನ್ಸ್ ಮಾಲಿಕತ್ವದ ಮುಂಬೈ ಇಂಡಿಯನ್ಸ್ ದ.ಆಫ್ರಿಕಾ ಮತ್ತು ಯುಎಇ ಕ್ರಿಕೆಟ್ ಲೀಗ್ ನಲ್ಲೂ ಫ್ರಾಂಚೈಸಿ ಖರೀದಿ ಮಾಡಿದೆ.

ಇದೀಗ ಎರಡೂ ಫ್ರಾಂಚೈಸಿಗಳಿಗೂ ಮುಂಬೈ ಇಂಡಿಯನ್ಸ್ ಹೆಸರು ಘೋಷಣೆ ಮಾಡಿದೆ. ದ.ಆಫ್ರಿಕಾದ ಕ್ಯಾಪ್ ಟೌನ್ ತಂಡದ ಮಾಲಿಕತ್ವ ಪಡೆದಿರುವ ಮುಂಬೈ ಇಂಡಿಯನ್ಸ್ ಈ ತಂಡಕ್ಕೆ ಎಂಐ ಕ್ಯಾಪ್ ಟೌನ್ ಎಂದು ನಾಮಕರಣ ಮಾಡಿದೆ. ಇನ್ನು, ಯುಎಇ ಲೀಗ್ ತಂಡಕ್ಕೆ ಎಂಐ ಎಮಿರೇಟ್ಸ್ ಎಂದು ಹೆಸರು ಘೋಷಣೆ ಮಾಡಿದೆ.

ಐಪಿಎಲ್ ಮಾದರಿಯಲ್ಲೇ ದ.ಆಫ್ರಿಕಾ ಕ್ರಿಕೆಟ್ ಲೀಗ್ ಕೂಡಾ ನಡೆಯಲಿದ್ದು, ಈ ಲೀಗ್ ನಲ್ಲಿ ಬಹುತೇಕ ತಂಡಗಳ ಮಾಲಿಕತ್ವ ಭಾರತೀಯ ಕಂಪನಿಗಳದ್ದೇ ಎನ್ನುವುದು ವಿಶೇಷ. ಮುಂದಿನ ವರ್ಷ ಜನವರಿಯಲ್ಲಿ ಲೀಗ್ ಗೆ ಚಾಲನೆ ಸಿಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮುಂದಿನ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾರತಕ್ಕೆ ಪದಕ ತಂದುಕೊಡುವ ಕುಸ್ತಿಯೇ ಇಲ್ಲ! ಕಾರಣವೇನು ಗೊತ್ತಾ?