Select Your Language

Notifications

webdunia
webdunia
webdunia
webdunia

ಮುಂದಿನ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾರತಕ್ಕೆ ಪದಕ ತಂದುಕೊಡುವ ಕುಸ್ತಿಯೇ ಇಲ್ಲ! ಕಾರಣವೇನು ಗೊತ್ತಾ?

ಮುಂದಿನ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾರತಕ್ಕೆ ಪದಕ ತಂದುಕೊಡುವ ಕುಸ್ತಿಯೇ ಇಲ್ಲ! ಕಾರಣವೇನು ಗೊತ್ತಾ?
ನವದೆಹಲಿ , ಬುಧವಾರ, 10 ಆಗಸ್ಟ್ 2022 (08:40 IST)
ನವದೆಹಲಿ: ಈ ಬಾರಿ ಭಾರತಕ್ಕೆ ಚಿನ್ನದ ಪದಕಗಳ ಸುರಿಮಳೆಯೇಗೈದಿದ್ದ ಕುಸ್ತಿ ಮುಂದಿನ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಇರಲ್ಲ! ಇದಕ್ಕೆ ಕಾರಣವೇನು ಗೊತ್ತಾ?

ಮುಂದಿನ ಕಾಮನ್ ವೆಲ್ತ್ ಗೇಮ್ಸ್ 2026 ರಲ್ಲಿ ಆಸ್ಟ್ರೇಲಿಯಾದ ವಿಕ್ಟೋರಿಯಾ, ಮೆಲ್ಬೋರ್ನ್ ನಗರಗಳಲ್ಲಿ ನಡೆಯಲಿದೆ. ಈಗಾಗಲೇ ಈ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಆಯೋಜಿಸುವ ಕ್ರೀಡೆಗಳ ವಿವರ ಹೊರಬಿದ್ದಿದೆ. ಆದರೆ ಇದರಲ್ಲಿ ಭಾರತೀಯರು ಪ್ರಬಲರಾಗಿರುವ ಕುಸ್ತಿ, ಶೂಟಿಂಗ್, ಆರ್ಚರಿ ಒಳಗೊಂಡಿಲ್ಲ. ಇದು ಭಾರತದ ಅಸಮಾಧಾನಕ್ಕೆ ಕಾರಣವಾಗಿದೆ. ಹೀಗಾಗಿ ಈಗಾಗಲೇ ಭಾರತೀಯ ಒಲಿಂಪಿಕ್ಸ್ ಸಂಸ್ಥೆ ಶೂಟಿಂಗ್, ಆರ್ಚರಿ ಮತ್ತು ಕುಸ್ತಿಯನ್ನು ಸೇರ್ಪಡೆಗೊಳಿಸುವಂತೆ ಆಯೋಜಕರಿಗೆ ಒತ್ತಾಯಿಸಿದೆ.

ಸಾಮಾನ್ಯವಾಗಿ ಯಾವ ರಾಷ್ಟ್ರ ಕಾಮನ್ ವೆಲ್ತ್ ಗೇಮ್ಸ್ ಆಯೋಜಿಸುತ್ತದೋ ಆ ರಾಷ್ಟ್ರಕ್ಕೆ ಯಾವ ಕ್ರೀಡೆ ಒಳಗೊಳ್ಳಬೇಕೆಂದು ನಿರ್ಧರಿಸುವ ಹಕ್ಕು ಇರುತ್ತದೆ. ಆದರೆ ಆಸ್ಟ್ರೇಲಿಯಾ ಕುಸ್ತಿ, ಶೂಟಿಂಗ್ ಇತ್ಯಾದಿ ವಿಭಾಗಗಳಲ್ಲಿ ಅಷ್ಟೊಂದು ಪರಿಣಿತರನ್ನು ಹೊಂದಿಲ್ಲ. ಈ ಕಾರಣಕ್ಕೆ ಆ ಕಾಮನ್ ವೆಲ್ತ್ ಗೇಮ್ಸ್ ನಿಂದ ಈ ಆಟಗಳನ್ನು ಹೊರಗಿಡಲಾಗಿದೆ. ಇದು ಭಾರತದಂತಹ ರಾಷ್ಟ್ರಗಳಿಗೆ ಹೊಡೆತ ನೀಡಲಿದೆ.

ಈ ಬಾರಿ ಬರ್ಮಿಂಗ್ ಹ್ಯಾಮ್ ನಲ್ಲಿ ನಡೆದ ಕೂಟದಲ್ಲೂ ಶೂಟಿಂಗ್, ಆರ್ಚರಿಯನ್ನು ಹೊರಗಿಡಲಾಗಿತ್ತು. ಇದೂ ಕೂಡಾ ಭಾರತದ ಪದಕ ಬೇಟೆಗೆ ಕೊಂಚ ಹಿನ್ನಡೆಯಾಗಿತ್ತು. ಮುಂದಿನ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಕುಸ್ತಿ ಇಲ್ಲದೇ ಹೋದರೆ ಭಾರತದ ಪದಕ ಬೇಟೆಗೆ ದೊಡ್ಡ ಹಿನ್ನಡೆಯಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಮನ್ ವೆಲ್ತ್ ಹೀರೋಗಳಿಗೆ ಅಭಿನಂದಿಸಿದ ವಿರಾಟ್ ಕೊಹ್ಲಿ