ಮುಂಬೈ : ದೇಶದ ಮೊದಲ ಡಬ್ಬಲ್ ಡೆಕ್ಕರ್ ಹವಾನಿಯಂತ್ರಿತ (ಎಸಿ) ಬಸ್ ಸೇರಿದಂತೆ 2 ಎಲೆಕ್ಟ್ರಿಕ್ ಬಸ್ಗಳು ಮುಂಬೈನಲ್ಲಿ ಇಂದಿನಿಂದ ಕಾರ್ಯಾರಂಭ ಮಾಡಿವೆ.
ಈ ಬಸ್ಗಳು ಉತ್ತಮ ಆಕರ್ಷಣೆಯಾಗಿದ್ದು, ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡಲಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಬಸ್ಗಳಲ್ಲಿ 1 ಆ್ಯಪ್ (ತಂತ್ರಾಂಶ) ನಿಯಂತ್ರಿತ ಆಗಿದ್ದು, ಮತ್ತೊಂದು ನಿಯಂತ್ರಿತ ಎಲೆಕ್ಟಿಕ್ ಡಬ್ಬಲ್ ಡೆಕ್ಕರ್ ಬಸ್ ಆಗಿದೆ.
ಕೇಂದ್ರ ಸಚಿವ ನಿತಿನ್ ಗಡ್ಕರಿ, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಹಾಗೂ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಈ ಬಸ್ಗಳಿಗೆ ಚಾಲನೆ ನೀಡಲಿದ್ದಾರೆ. ಮುಂಬೈ ನಗರ ಸಾರ್ವಜನಿಕ ಸಾರಿಗೆ ನಗರದಾದ್ಯಂತ ಆಪ್ ಆಧಾರಿತ ಬಸ್ ಸೇವೆ ನೀಡಲು ಯೋಜನೆ ರೂಪಿಸಿದೆ.