Publish Date: Sun, 31 Jul 2022 (09:37 IST)
Updated Date: Sun, 31 Jul 2022 (09:39 IST)
ಮುಂಬೈ : ರಾಜಧಾನಿ ಬಗ್ಗೆ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ನೀಡಿದ್ದ ಹೇಳಿಕೆಗೆ ಮುಖ್ಯಮಂತ್ರಿ ಏಕನಾಥ್ ಶಿಂದೆ ವಿರೋಧಿಸಿದ್ದಾರೆ.
ರಾಜ್ಯಪಾಲರು ಅವರ ವೈಯಕ್ತಿಕ ಅಭಿಪ್ರಾಯಗಳನ್ನು ಹೇಳಿದ್ದಾರೆ. ಆದರೆ ನಾವು ಅವರ ಹೇಳಿಕೆಗಳನ್ನು ಒಪ್ಪುವುದಿಲ್ಲ. ರಾಜ್ಯಪಾಲರ ಹುದ್ದೆ ಸಾಂವಿಧಾನಿಕ ಹುದ್ದೆ. ಅವರು ಸಂವಿಧಾನದ ನೈತಿಕತೆಯ ಅಡಿಯಲ್ಲಿ ಮಾತನಾಡಬೇಕು.
ಮುಂಬೈಗೆ ಮರಾಠಿಗರ ಕೊಡುಗೆಯನ್ನು ನಾವು ಎಂದಿಗೂ ಮರೆಯಲಾಗುವುದಿಲ್ಲ ಎಂದು ಶಿಂದೆ ಹೇಳಿಕೆ ನೀಡಿದ್ದಾರೆ.
ಮುಂಬೈಯನ್ನು ಮಹಾರಾಷ್ಟ್ರದ ರಾಜಧಾನಿಯನ್ನಾಗಿ ಮಾಡಲು 105 ಜನರು ಆಂದೋಲನದಲ್ಲಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದರು. ಮುಂಬೈನ ಮರಾಠಿ ಅಸ್ಮಿತೆ ಕಾಪಾಡುವಲ್ಲಿ ಶಿವಸೇನಾ ಸಂಸ್ಥಾಪಕ ದಿವಂಗತ ಬಾಳ ಠಾಕ್ರೆ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಶಿಂದೆ ತಿಳಿಸಿದ್ದಾರೆ.