Publish Date: Tue, 20 Sep 2022 (15:24 IST)
Updated Date: Tue, 20 Sep 2022 (15:26 IST)
ಬಾಲ್ಯದಲ್ಲಿ ತನ್ನ ಮೇಲೆ ಅತ್ಯಾಚಾರವೆಸಗಲಾಗಿದೆ ಎಂದು ಹೇಳಿ 35 ವರ್ಷದ ಮಹಿಳೆಯೊಬ್ಬಳು ಘಟನೆ ನಡೆದ ಬರೋಬ್ಬರಿ 28 ವರ್ಷಗಳ ಬಳಿಕ ಪೊಲೀಸ್ ಠಾಣೆ ಮೆಟ್ಟಿಲೇರಿದ ವಿಚಿತ್ರ ಘಟನೆ ಉತ್ತರಪ್ರದೇಶದಅಲಿಗಡದಲ್ಲಿ ನಡೆದಿದೆ. ತಾನು ಏಳು ವರ್ಷದವಳಿದ್ದಾಗ ತನ್ನ ಮೇಲೆ ತನ್ನ ಮಲತಂದೆಯ ಕುಟುಂಬದ ಅನೇಕ ಪುರುಷರು ನನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಆಕೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.