Publish Date: Mon, 03 Oct 2022 (15:03 IST)
Updated Date: Mon, 03 Oct 2022 (16:07 IST)
ಮೆಜೆಸ್ಟಿಕ್ ರೈಲ್ವೆ ನಿಲ್ದಾಣ ಸಮೀಪದ ರೈಲ್ವೆ ಬ್ರಿಡ್ಜ್ ಕೆಳಗೆ ಸೋಮವಾರ ಬೆಳ್ಳಂಬೆಳಗ್ಗೆ ಭಾರೀ ಗಾತ್ರದ ಲಾರಿಯೊಂದು ಸಿಲುಕಿದ್ದು, ಟ್ರಾಫಿಕ್ ಜಾಮ್ ಉಂಟಾಗಿದೆ.
ಬ್ರಿಡ್ಜ್ನ ಕೆಳಗೆ ಭಾರೀ ಗಅತ್ರದ ವಾಹನಗಳು ಸಂಚರಿಸಲು ಸಾಧ್ಯವಿಲ್ಲ.
ಲಾರಿ ಚಾಲಕ ಎತ್ತರದ ಮಿತಿ ಗೊತ್ತಿಲ್ಲದೆ ಬ್ರಿಡ್ಜ್ನ ಕೆಳಗೆ ನುಗ್ಗಿದ್ದು, ಲಾರಿ ಸಿಲುಕಿದೆ. ಲಾರಿಯನ್ನ ಹೊರ ತೆಗೆಯಲು ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.
ಬೆಂಗಳೂರು ನಗರದ ಕೇಂದ್ರವಾದ ಮೆಜೆಸ್ಟಿಕ್ ಬಳಿ ಸದಾ ವಾಹನ ದಟ್ಟಣೆ ಹೆಚ್ಚಾಗಿರುತ್ತೆ. ಇನ್ನು ಲಾರಿ ಸಿಲುಕಿರುವ ಪರಿಣಾಮ ಸುಮಾರು ದೂರ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನ ಸವಾರರು ಮತ್ತು ಪ್ರಯಾಣಿಕರು ಪರದಾಡುತ್ತಿದ್ದಾರೆ.