Publish Date: Mon, 03 Oct 2022 (16:22 IST)
Updated Date: Mon, 03 Oct 2022 (19:24 IST)
ಮಿಲ್ಕ್ ಬೂತ್ ಇದ್ದರೂ ಮತ್ತೊಂದು ನಂದಿನಿ ಮಿಲ್ಕ್ ಬೂತ್ ಏಕಾಏಕಿ ತಲೆ ಎತ್ತಿರುವ ಘಟನೆ ಬೆಂಗಳೂರು ಉತ್ತರ ತಾಲ್ಲೂಕಿನ ಮಾದನಾಯಕನಹಳ್ಳಿ ನಗರಸಭೆ ವ್ಯಾಪ್ತಿಯ ಚಿಕ್ಕಬಿದರಕಲ್ಲು ಗ್ರಾಮ ನಡೆದಿದೆ.
ಬೆಂಗಳೂರು ಉತ್ತರ ತಾಲ್ಲೂಕಿನ ಮಾದನಾಯಕನಹಳ್ಳಿ ನಗರಸಭೆ ವ್ಯಾಪ್ತಿಯ ಚಿಕ್ಕಬಿದರಕಲ್ಲು ಗ್ರಾಮದಲ್ಲಿ ಈಗಾಗಲೇ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ನಂದಿನಿ ಬೂತ್ ಇದೆ.ಆದ್ರೂ ಮತ್ತೊಂದು ಬೂತ್ ಪರ್ಮಿಷನ್ ನೀಡಿರುವುದಕ್ಕೆ ಸ್ಥಳೀಯರ ವಿರೋಧ ವ್ಯಕ್ತವಾಗಿದೆ.ಜೊತೆಗೆ ರಾತ್ರೋರಾತ್ರಿ ಮರ ಕಡಿದು ಹಾಗೂ ಸರ್ಕಾರಿ ಶಾಲೆ ಕಿಟಕಿ ಮುಚ್ಚಿ ನಂದಿನಿ ಮಿಲ್ಕ್ ಪಾರ್ಲರ್ ಬೂತ್ ಓಪನ್ ಮಾಡಿರುವುದನ್ನು ಸ್ಥಳೀಯರು ಖಂಡಿಸಿದ್ದಾರೆ.
ಸ್ಥಳೀಯರಿಗೆ ಅವಕಾಶ ನೀಡದ ಬೇರೆಯವರಿಗೆ ಬೂತ್ ಓಪನ್ ಮಾಡಲು ಅವಕಾಶ ನೀಡಿದ ನಗರಸಭೆ ಆಯುಕ್ತರ ನಡೆಗೆ ಆಕ್ರೋಶ ವ್ಯಕ್ತವಾಗಿದ್ದು,ಇದೇ ವಿಷಯವಾಗಿ ನಗರಸಭೆ ಅಧಿಕಾರಿಗಳು ಹಾಗೂ ಸಾರ್ವಜನಿಕರ ನಡುವೆ ತೀವ್ರ ವಾಗ್ವಾದ ನಡೆದಿದೆ.