Publish Date: Fri, 30 Dec 2022 (20:41 IST)
Updated Date: Fri, 30 Dec 2022 (20:43 IST)
ಮನುಷ್ಯ ಪ್ರಾಣಿಗಳನ್ನು ತೊರೆದು ಬದುಕಿರಲಾರ. ಪ್ರಾಣಿಗಳೊಂದಿಗೆ ಆತನ ಜೀವನವೂ ಸಾಗುತ್ತದೆ. ನಾಯಿ, ಬೆಕ್ಕುಗಳನ್ನು ಆತ ಸಾಕುತ್ತಾನೆ. ಅವುಗಳು ಅಪಾಯವನ್ನುಂಟು ಮಾಡುವುದಿಲ್ಲ. ಆದರೆ ಕೆಲವರು ಅಪಾಯಕಾರಿಯಾದ ಪ್ರಾಣಿಗಳನ್ನು ಸಾಕಿ, ಇಲ್ಲವೆ ಝೂಗಳಲ್ಲಿ, ಪಾರ್ಕ್ಗಳಲ್ಲಿ ಅವುಗಳೊಂದಿಗೆ ಒಡನಾಟ ಹೊಂದಿರುತ್ತಾರೆ. ಇದು ತುಂಬಾ ಅಪಾಯಕಾರಿ. ಇಲ್ಲೊಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗ್ತಿದೆ. ಇದರಲ್ಲಿ ಒಬ್ಬಾತ ಜಾಗ್ವಾರ್ ಅನ್ನು ಮುದ್ದಿಸುತ್ತಿದ್ದಾನೆ. ಅವುಗಳು ಮಾಂಸ ಭಕ್ಷಕ ಪ್ರಾಣಿಗಳಾಗಿದ್ದು, ಸ್ಪಲ್ಪ ಯಾಮಾರಿದರೂ ಜೀವಕ್ಕೆ ಅಪಾಯ. ಈ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ವ್ಯಾಪಕವಾಗಿ ವೈರಲ್ ಆಗ್ತಿದೆ.