Select Your Language

Notifications

webdunia
webdunia
webdunia
webdunia

ಹಾಲು ಕುಡಿಯುವ ಸಿಂಹದ ಮರಿ!

A lion cub drinking milk
bangalore , ಶುಕ್ರವಾರ, 30 ಡಿಸೆಂಬರ್ 2022 (20:19 IST)
ಪ್ರಾಣಿಗಳ ಮರಿಗಳೂ ಚಿಕ್ಕವಿರುವಾಗ ಮಕ್ಕಳಂತೆ ಇರುತ್ತವೆ. ಅವುಗಳು ಯಾರಿಗೂ ಅಪಾಯವನ್ನುಂಟು ಮಾಡುವುದಿಲ್ಲ. ಅವುಗಳು ಸಿಂಹ, ಚಿರತೆ ಮರಿಯಾದರೂ ಸರಿ. ಅವುಗಳು ಯಾರಿಗೂ ತೊಂದರೆಯನ್ನುಂಟು ಮಾಡುವುದಿಲ್ಲ. ತಾಯಿಯಿಂದ ಬೇರ್ಪಟ್ಟ ಹುಲಿ, ಸಿಂಹದ ಮರಿಗಳನ್ನು ಒಂದು ಹಂತದವರೆಗೆ ಮನುಷ್ಯ ಸಾಕ್ತಾನೆ. ನಂತರ ಕೆಲವೊಂದು ಪ್ರಾಣಿಗಳು ತನ್ನ ನಿಜ ವ್ಯಕ್ತಿತ್ವ ತೋರಿಸುತ್ತವೆ. ಕೆಲವು ಸಾಕಿದ ಮನುಷ್ಯನನ್ನು ಮರೆಯುವುದಿಲ್ಲ. ಇಲ್ಲೊಂದು ಸಿಂಹದ ಮರಿಯ ಮುದ್ದಾದ ವಿಡಿಯೋ ವೈರಲ್​ ಆಗ್ತಿದೆ. ಈ ಮರಿಗೆ ವ್ಯಕ್ತಿಯೋರ್ವ ಬಾಟಲಿಯಲ್ಲಿ ಹಾಲುಣಿಸುತ್ತಿದ್ದಾನೆ. ಇದು ತಾಯಿಯಿಂದ ಬೇರ್ಪಟ್ಟಂತೆ ತೋರ್ತಿದೆ. ಆತ ಹಾಲು ಕುಡಿಸುತ್ತಿದ್ದಂತೆ, ಅದು ಹಾಲು ಕುಡಿಯುತ್ತಿದೆ. ಈ ವಿಡಿಯೋ ಮುದ್ದಾಗಿದ್ದು, ಸೋಶಿಯಲ್​ ಮಿಡಿಯಾದಲ್ಲಿ ವೈರಲ್​ ಆಗ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೆಸರಿನಲ್ಲಿ ಆನೆ ಮರಿ ಆಟ