Select Your Language

Notifications

webdunia
webdunia
webdunia
webdunia

ಕಾಂಪೌಂಡ್ ಗೋಡೆ ಕುಸಿದು ಕಾರ್ಮಿಕರು ಸಾವು

The compound wall collapsed and the workers died
bangalore , ಶುಕ್ರವಾರ, 30 ಡಿಸೆಂಬರ್ 2022 (18:20 IST)
ಕಾಂಪೌಂಡ್ ದುರಸ್ತಿ ಕಾರ್ಯದ ವೇಳೆ ಗೋಡೆ ಕುಸಿದು ಇಬ್ಬರು ಕಾರ್ಮಿಕರು ಸಾವನ್ನಪ್ಪಿರೋ ಘಟನೆ ಭಾರತೀನವರದ ಎಂಇಜಿ‌ ಆಫೀಸರ್ಸ್ ಕಾಲೋನಿ ಆವರಣದಲ್ಲಿ ನಡೆದಿದೆ.ಇಂದು ಸಂಜೆ 6.30ರ ಸುಮಾರಿಗೆ ಘಟನೆ ನಡೆದಿದ್ದು, ಘಟನೆಯಲ್ಲಿ ಆಶಮ್ಮ(21) ಹಾಗೂ ಅಕ್ರಮ್ ಉಲ್ ಹಕ್(22)ಮೃತ ದುರ್ದೈವಿಗಳಾಗಿದ್ದಾರೆ.ಚಳ್ಳಕೆರೆ ಮೂಲದ ಆಶಮ್ಮ ಹಾಗೂ ಪಶ್ಚಿಮ ಬಂಗಾಳ ಮೂಲದ ಅಕ್ರಮ್ ಉಲ್ ಹಕ್ ಮೃತ ದುರ್ದೈವಿಗಳಾಗಿದ್ದಾರೆ.
ಕಾಂಪೌಂಡ್ ಕುಸಿದು ಇಬ್ಬರಿಗೆ ಗಂಭೀರ ಗಾಯವಾದ ಹಿನ್ನೆಲೆ ತಕ್ಷಣ ಆಸ್ಪತ್ರೆಗೆ ಸಾಗಿಸುವಾಗ ಕಾರ್ಯವಾದ್ರು ಮಾರ್ಗ ಮಧ್ಯೆ  ಆಶಮ್ಮ ಸಾವನ್ನಪ್ಪಿದ್ರೆ,ಮತ್ತೊಬ್ಬಾತ ಪಶ್ಚಿಮ ಬಂಗಾಳ ಮೂಲದ ಅಕ್ರಮ್ ಉಲ್ ಹಕ್ ಕೂಡ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.ಕಾಂಪೌಂಡ್ ನ್ನ ಇತ್ತೀಚೆಗಷ್ಟೇ ರಿಪೇರಿ ಮಾಡಲಾಗಿತ್ತು ಆದ್ರೆ ಮರ ಇದ್ದಿದ್ರಿಂದ ಮತ್ತೆ ದುರಸ್ತಿ ಕಾರ್ಯ ಮುಂದುವರೆಸಿದ್ರು.ಇತ್ತೀಚೆಗಷ್ಟೇ ಆಶಮ್ಮ ಮದುವೆಯಾಗಿದ್ಳು.  ಈ ಘಟನೆ ತಿಳಿದು ಬಾಣಸವಾಡಿಯಿಂದ ಹೊರಟಿದ್ದ ಆಶಮ್ಮ ಪತಿಕೂಡ ಗಾಬರಿಯಲ್ಲಿ ಬರುವಾಗ ಅವರ ಬೈಕ್ ಕೂಡ ಆಕ್ಸಿಡೆಂಟ್ ಆಗಿದ್ದು ಆಸ್ಪತ್ರೆ ಸೇರಿದ್ದಾರೆ.ಕುಟುಂಬಸ್ಥರ ದೂರಿನನ್ವಯ ಭಾರತಿನಗರ ಠಾಣೆಯಲದಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೋದಿ ತಾಯಿ ನಿಧಾನಕ್ಕೆ ಸಿಎಂ ಸಂತಾಪ