Select Your Language

Notifications

webdunia
webdunia
webdunia
webdunia

ಸರ್ಜಾಪುರದಲ್ಲಿ ಸರಣಿ ರಸ್ತೆ ಅಪಘಾತ, ಇಬ್ಬರಿಗೆ ಗಾಯ, ಅಪಘಾತ ದೃಶ್ಯ ಸೆರೆ

ಸರ್ಜಾಪುರದಲ್ಲಿ ಸರಣಿ ರಸ್ತೆ ಅಪಘಾತ, ಇಬ್ಬರಿಗೆ ಗಾಯ, ಅಪಘಾತ ದೃಶ್ಯ ಸೆರೆ
bangalore , ಶುಕ್ರವಾರ, 30 ಡಿಸೆಂಬರ್ 2022 (15:12 IST)
ಸರ್ಜಾಪುರ ರಸ್ತೆಯಲ್ಲಿ ಸರಣಿ ಅಪಘಾತ ಸಂಭವಿಸಿದ್ದು,ವೇಗದ ಚಾಲನೆಯಿಂದ ನಿಯಂತ್ರಣ ಕಳೆದುಕೊಂಡ ಚಾಲಕನಿಂದ ಸರಣಿ ಅಪಘಾತಕ್ಕೆ ಕಾರಣವಾಗಿದೆ.
 
ಸರ್ಜಾಪುರ ರಸ್ತೆಯ ವಿಪ್ರೋ ಗೇಟ್ ಬಳಿ‌ ಘಟನೆ ನಡೆದಿದ್ದು,ಓವರ್ ಸ್ಟೀಡ್ ನಿಂದಾಗಿ ಮುಂದೆ ಹೋಗುತ್ತಿದ್ದು ಒಂದು ಬೈಕ್, ಒಂದು ಆಟೊ ಹಾಗೂ ಐದು ಕಾರುಗಳಿಗೆ ಡಿಕ್ಕಿ ಹೊಡೆದಿದೆ.ದುರ್ಘಟನೆಯಲ್ಲಿ ಜೊಮೊಟೊ ಡೆಲಿವರಿ ಬಾಯ್ ಸೇರಿ ಇಬ್ಬರಿಗೆ ಗಾಯವಾಗಿದೆ.ಕಾರು ಚಾಲಕನಿಗೂ ಸಣ್ಣಪುಟ್ಟ ಗಾಯವಾಗಿದ್ದು, ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಿಂದೆ ಚಲಿಸುತಿದ್ದ ಕಾರಿನ ಡ್ಯಾಶ್ ಬೋರ್ಡ್ ನಲ್ಲಿ ಅಪಘಾತದ ದೃಶ್ಯ ಸೆರೆಯಾಗಿದೆ.ಈ ಸಂಬಂಧ ಎಚ್ ಎಸ್ ಆರ್ ಲೇಔಟ್ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾ : ದೇವಾಲಯಗಳಿಗೆ ಟಫ್ ರೂಲ್ಸ್?