Publish Date: Fri, 04 Nov 2022 (19:27 IST)
Updated Date: Fri, 04 Nov 2022 (19:30 IST)
ಸರ್ಕಾರಿ ಬಸ್ ಪಲ್ಟಿಯಾಗಿ 13 ಮಂದಿಗೆ ಗಾಯವಾಗಿರುವ ಘಟನೆ ಚಾಮರಾಜನಗರದ ಹೊರವಲಯದ ನಂಜನಗೂಡು ರಸ್ತೆಯಲ್ಲಿ ನಡೆದಿದೆ. ನಿನ್ನೆ ತಡರಾತ್ರಿ ಬಸ್ ಪಲ್ಟಿಯಾಗಿ 13 ಮಂದಿಗೆ ಗಾಯವಾಗಿದ್ದು ಗಾಯಳುಗಳನ್ನ ಸಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೈಸೂರಿಂದ ಕೊಯಮತ್ತೂರಿಗೆ ಸರ್ಕಾರಿ ಬಸ್ ತೆರಳುತ್ತಿತ್ತು. ಮಧ್ಯರಾತ್ರಿ 2ರ ಸುಮಾರಿಗೆ ಹೊರವಲಯದಲ್ಲಿರುವ ಸಣ್ಣ ಸೇತುವೆಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದ್ದು, ಚಾಲಕ ಹಾಗೂ ಕಂಡಕ್ಟರ್ ಸೇರಿ ಮೂವರಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ಚಾಮರಾಜನಗರ ಪಟ್ಟಣ ಠಾಣೆಯ QRT ಹಾಗೂ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಸಂಚಾರಿ ಠಾಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ