Publish Date: Fri, 30 Dec 2022 (15:25 IST)
Updated Date: Fri, 30 Dec 2022 (15:27 IST)
ಹೆಚ್ಚುತ್ತಿರುವ ಇಂಧನ ಬೆಲೆಯ ಹಿನ್ನಲೆ, ಮಾಸಿಕ ಪಾಸ್, ದಿನದ ಪಾಸ್ ಹಾಗೂ ದಿನದ ಟಿಕೆಟ್ ದರ ವನ್ನ ಹೆಚ್ಚಿಸುವ ಮೂಲಕ ಬಿಎಂಟಿಸಿ ಪ್ರಯಾಣಿಕರಿಗೆ ಶಾಕ್ ನೀಡಿದೆ. ಹೊಸ ವರ್ಷದ ಮೊದಲ ವಾರದಿಂದಲೇ BMTC ಪ್ರಯಾಣಿಕರಿಗೆ ನಿರಾಸೆ ಮೂಡಿಸಿದೆ. BMTC ಸಂಸ್ಥೆಯ ಆರ್ಥಿಕ ನಷ್ಟ ಸರಿದೂಗಿಸಲು ಈ ತೀರ್ಮಾನ ಕೈಗೊಳ್ಳಲಾಗಿದೆ. ಇದರ ಜೊತೆಗೆ ಮಾಸಿಕ ಪಾಸ್ ತೆಗೆದುಕೊಂಡವರಿಗೆ ಮತ್ತೊಂದು ಶಾಕ್ ನೀಡಿದ್ದು, ಸಾಮಾನ್ಯ ಪಾಸ್ ಹಾಗೂ ಹಿರಿಯ ನಾಗರಿಕರ ಪಾಸ್ ಪಡೆದವರು ಭಾನುವಾರ ಪಾಸ್ ಬಳಸಿ ಉಚಿತ ಪ್ರಯಾಣ ಮಾಡುವಂತಿಲ್ಲ.
ಮೊದಲು ಬಸ್ ಪಾಸ್ ದರ ಎಷ್ಟಿತ್ತು ಈಗ ಎಷ್ಟಿದೆ…?
ವಜ್ರ ಪ್ರಸ್ತುತ ಮಾಸಿಕ ದರ 1428+ GST 72 ಒಟ್ಟು 1500 ರೂಪಾಯಿಗಳಿತ್ತು, ಸದ್ಯ ಪರಿಷ್ಕೃತ ವಜ್ರ ಮಾಸಿಕ ಪಾಸಿನ ದರ 1714.29 ಪೈಸೆ + GST 85.71= ಒಟ್ಟು 1800 ರೂಪಾಯಿಯಾಗಿದೆ.
ವಜ್ರ ವೋಲ್ವೋ ಪ್ರಸ್ತುತ ದೈನಿಕ ಪಾಸಿನ ದರ 95+ GST 5 = 100 ರೂಪಾಯಿ ಇತ್ತು, ಪರಿಷ್ಕೃತ ದರ 114.29+ 5.21= 120 ರೂಪಾಯಿಗೆ ಹೆಚ್ಚಳವಾಗಿದೆ.