Publish Date: Fri, 30 Dec 2022 (12:11 IST)
Updated Date: Fri, 30 Dec 2022 (12:44 IST)
ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ತಾಯಿಯನ್ನು ಕಳೆದುಕೊಂಡರೂ ಮತ್ತೆ ಕೆಲಸ ಮಾಡ್ತಿದ್ದಾರೆ. ಇದು ಮೋದಿ ಅವರ ಬದ್ಧತೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಮೋದಿ ಅವರ ತಾಯಿ ವಿಧಿವಶರಾಗಿದ್ದಾರೆ. ಕೆಲ ದಿನಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಆದ್ರೆ ಇದೊಂದು ದುಃಖದ ಸಂಗತಿ.
ಮೋದಿ ಅವರು ಸಿಎಂ ಆಗಿದ್ದಾಗಿನಿಂದ, ಪಿಎಂ ಆಗಿದ್ದಾಗಲೂ ತಮ್ಮ ತಾಯಿಗೆ ತೋರಿಸಿದ ಗೌರವ, ಪ್ರೀತಿ ದೊಡ್ಡದು. ಹಾಗೆಯೇ ತಾಯಿ ತಮ್ಮ ಮಗನಿಗೆ ತೋರಿಸುತ್ತಿದ್ದ ಮಮತೆ, ವಾತ್ಸಲ್ಯ ನೋಡುವ ಭಾಗ್ಯವೂ ನಮಗೆ ಸಿಕ್ಕಿತ್ತು ಎಂದು ಭಾವುಕರಾಗಿದ್ದಾರೆ.
ಹೀರಾಬೆನ್ ಮೋದಿ ಅವರನ್ನು ಆದರ್ಶ ವ್ಯಕ್ತಿಯಾಗಿ ಬೆಳೆಸಿದ್ದಾರೆ. ಹೀರಾಬೆನ್ ಅವರೂ ಸಹ ಕರ್ಮ ಯೋಗಿ, ಅದೇ ರೀತಿ ಮೋದಿಯೂ ಹಾಗೇ ಕರ್ಮಯೋಗಿ ಆಗಿದ್ದಾರೆ. ತಾಯಿ ಅಂತ್ಯಕ್ರಿಯೆ ಮಾಡಿ ಮತ್ತೆ ಕೆಲಸ ಮಾಡ್ತಿದ್ದಾರೆ. ಇದು ಅವರ ಕೆಲಸದ ಬದ್ಧತೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹಾರೈಸಿದ್ದಾರೆ.