Select Your Language

Notifications

webdunia
webdunia
webdunia
webdunia

ರಾಜ್ಯದಲ್ಲಿ 2.53 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ : ಬೊಮ್ಮಾಯಿ

ರಾಜ್ಯದಲ್ಲಿ 2.53 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ : ಬೊಮ್ಮಾಯಿ
ಬೆಳಗಾವಿ , ಶುಕ್ರವಾರ, 23 ಡಿಸೆಂಬರ್ 2022 (07:13 IST)
ಬೆಳಗಾವಿ : ರಾಜ್ಯದಲ್ಲಿ 2.53 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇದ್ದು, ಈ ವರ್ಷದಲ್ಲಿ ಒಂದು ಲಕ್ಷ ಹುದ್ದೆ ಭರ್ತಿ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ಮಂಜೇಗೌಡ ಪ್ರಶ್ನೆ ಕೇಳಿದರು. ಇದಕ್ಕೆ ಉತ್ತರ ನೀಡಿದ ಸಿಎಂ, ರಾಜ್ಯದಲ್ಲಿ ಒಟ್ಟು 7.60 ಲಕ್ಷ ಹುದ್ದೆ ಮಂಜೂರಾಗಿದೆ. ಈ ಪೈಕಿ 5.11 ಲಕ್ಷ ಹುದ್ದೆ ಭರ್ತಿಯಾಗಿವೆ. ಇದರಲ್ಲಿ 2.53 ಲಕ್ಷ ಹುದ್ದೆ ಖಾಲಿ ಇವೆ ಎಂದು ಮಾಹಿತಿ ನೀಡಿದರು.

ಸಿ ಮತ್ತು ಡಿ ಗ್ರೂಪ್ ಹುದ್ದೆಗಳನ್ನ ಗುತ್ತಿಗೆ ಆಧಾರದಲ್ಲಿ ತುಂಬಲು ಸೂಚನೆ ನೀಡಲಾಗಿದೆ. ಸರ್ಕಾರಿ ಕೆಲಸಕ್ಕೆ ತೊಂದರೆ ಆಗದಂತೆ ಕ್ರಮವಹಿಸಲಾಗಿದೆ. A ಮತ್ತು B ಗ್ರೂಪ್ ಹುದ್ದೆಗಳನ್ನ ಇನ್ಚಾರ್ಜ್ ನೀಡಲಾಗಿದೆ. ಈ ವರ್ಷ 1 ಲಕ್ಷ ಸರ್ಕಾರಿ ಹುದ್ದೆ ತುಂಬಲು ಒಪ್ಪಿಗೆ ನೀಡಿದ್ದೇನೆ. ಆದ್ಯತೆಯ ಇಲಾಖೆಗಳಲ್ಲಿ ನೇಮಕಾತಿ ಪ್ರಕ್ರಿಯೆ ಮಾಡ್ತೀವಿ ಎಂದು ತಿಳಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ತಾಜ್‌ಮಹಲ್ ಭೇಟಿಗೂ ಕೋವಿಡ್ ಪರೀಕ್ಷೆ ಕಡ್ಡಾಯ