Select Your Language

Notifications

webdunia
webdunia
webdunia
webdunia

ಜನವರಿ 1ರ ನಸುಕಿನ ಜಾವ 2 ಗಂಟೆವರೆಗೂ ನಮ್ಮ ಮೆಟ್ರೋ ಸಂಚಾರ

webdunia
bangalore , ಶುಕ್ರವಾರ, 30 ಡಿಸೆಂಬರ್ 2022 (18:30 IST)
ಜನವರಿ 1ರ ನಸುಕಿನ ಜಾವ 2 ಗಂಟೆವರೆಗೂ ನಮ್ಮ ಮೆಟ್ರೋ ಸಂಚಾರ ಮಾಡಲಿದೆ. ಕೊನೆಯ ನಮ್ಮ ಮೆಟ್ರೋ ಸಂಚಾರ ರಾತ್ರಿ 2 ಗಂಟೆಗೆ ಕೆಂಪೇಗೌಡ ಮೆಟ್ರೋ ನಿಲ್ದಾಣದಿಂದ ನಾಲ್ಕು ದಿಕ್ಕಿಗೆ ಹೊರಡಲಿದೆ ಎಂದು ಬಿಎಂಆರ್ ಸಿಎಲ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಬಿಎಂಆರ್ ಸಿಎಲ್ ನಮ್ಮ ಮೆಟ್ರೋ ಅವಧಿಯನ್ನು ವಿಸ್ತರಣೆ ಮಾಡಿದೆ. ಡಿಸೆಂಬರ್ 31 ರಂದು ರಾತ್ರಿ 3 ಗಂಟೆ ಮೆಟ್ರೋ ಸಂಚಾರ ಅವಧಿ ವಿಸ್ತರಿಸಿದೆ. ಜನವರಿ 1 ರಂದು ಎಂದಿನಂತೆ 5.30ಕ್ಕೆ ಮೆಟ್ರೋ ಸಂಚಾರ ಆರಂಭವಾಗಲಿದೆ. ಹೊಸ ವರ್ಷಾಚರಣೆ ಹಿನ್ನೆಲೆ ಎಂ.ಜಿ ರೋಡ್, ಬೈಯಪ್ಪನಹಳ್ಳಿ ಕಡೆಯಿಂದ ಸಂಚಾರ ಮಾಡುವ ಪ್ರಯಾಣಿಕರು ಮೆಟ್ರೋ ಬಳಕೆ ಮಾಡುವಂತೆ ತಿಳಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಪೌಂಡ್ ಗೋಡೆ ಕುಸಿದು ಕಾರ್ಮಿಕರು ಸಾವು