ಬೆಂಗಳೂರು : ಚುನಾವಣೆ ಹೊಸ್ತಿಲಲ್ಲಿ ರಾಜ್ಯ ಬಿಜೆಪಿಗೆ ಹೈಕಮಾಂಡ್ ಬೂಸ್ಟರ್ ಡೋಸ್ ಕೊಟ್ಟಿದೆ. ಒಂದು ರೀತಿಯಲ್ಲಿ ಪೊಲಿಟಿಕಲ್ ಸರ್ಜಿಕಲ್ ಸ್ಟ್ರೈಕ್ ಶುರುವಾಗಿದೆ.
ಮಾಸ್ ಲೀಡರ್ ಯಡಿಯೂರಪ್ಪಗೆ ಬಿಜೆಪಿಯ ಸರ್ವೋಚ್ಛ ಸಮಿತಿಗಳಾದ ಕೇಂದ್ರ ಸಂಸದೀಯ ಮಂಡಳಿ ಮತ್ತು ಕೇಂದ್ರ ಚುನಾವಣಾ ಸಮಿತಿಯಲ್ಲಿ ಸ್ಥಾನ ನೀಡಿದೆ. ಈ ಬೆನ್ನಲ್ಲೇ ಬಿಜೆಪಿ ಸಂಘಟನೆಗೆ ಸರ್ಜರಿ ನಡೆದಿದೆ ಅನ್ನೋ ಮಾತುಗಳ ಕೇಳಿ ಬರುತ್ತಿದೆ.
ಮುಂದಿನ ರಾಜ್ಯಾಧ್ಯಕ್ಷ ರೇಸ್ನಲ್ಲಿ ಯಾರ್ಯಾರು ಇದ್ದಾರೆ?, ನಾಲ್ವರು ಹೊಸ ಪ್ರಧಾನ ಕಾರ್ಯದರ್ಶಿಗಳ ನೇಮಕ ಆಗುತ್ತಾ ಅನ್ನೋ ಮಾತು ಕೇಳಿ ಬರುತ್ತಿದೆ. ಹೈಕಮಾಂಡ್ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ವಿಜಯೇಂದ್ರ ಹೆಸರು ಪರಿಗಣಿಸ್ತಾರಾ ಅಥವಾ ಆಗಸ್ಟ್ ಕಡೇ ವಾರದಲ್ಲಿ ಹೈಕಮಾಂಡ್ನಿಂದ ಮತ್ತೊಂದು ಶಾಕಿಂಗ್ ಸುದ್ದಿ ಹೊರಬೀಳುತ್ತಾ ಎಂಬುದನ್ನು ಕಾದದುನೋಡಬೇಕಿದೆ.
ಬಿಜೆಪಿ ನಿಯಮದಂತೆ ಆಗಸ್ಟ್ 28ಕ್ಕೆ ಕಟೀಲ್ ಅವಧಿ ಮುಕ್ತಾಯವಾಗಲಿದೆ. ಹೀಗಾಗಿ ಪಕ್ಷಕ್ಕೆ ಅಗತ್ಯವಿದ್ದರೆ ಅವಧಿ ವಿಸ್ತರಿಸಬಹುದು ಅಥವಾ ಪುನರ್ ಆಯ್ಕೆ ಮಾಡಬಹುದು. ಸದ್ಯದ ಬೆಳವಣಿಗೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಮಾಡುವ ಸಾಧ್ಯತೆಗಳಿವೆ.