ಕಾಲೇಜು ಯುವತಿಯನ್ನು ಕಿಡ್ನ್ಯಾಪ್ ಮಾಡಿ ಅತ್ಯಾಚಾರಕ್ಕೆ ಯತ್ನಿಸಿದ ಸ್ನೇಹಿತ. ಆಮೇಲೆ ನಡೆದದ್ದೇನು ಗೊತ್ತಾ?

ಬುಧವಾರ, 26 ಡಿಸೆಂಬರ್ 2018 (07:05 IST)
ಬೆಂಗಳೂರು : ಕಾಲೇಜು ಯುವತಿಯೊಬ್ಬಳನ್ನು  ಆಕೆಯ ಸ್ನೇಹಿತನೇ ಕಿಡ್ನ್ಯಾಪ್ ಮಾಡಿ ಅತ್ಯಾಚಾರ ಮಾಡಲು ಯತ್ನಸಿದ ಘಟನೆ ಬೆಂಗಳೂರಿನ ದಾಸರಹಳ್ಳಿ ಬಸ್ ನಿಲ್ದಾಣದ ಬಳಿ ನಡೆದಿದೆ.


ಯುವತಿ ಕಾಲೇಜು ಮುಗಿಸಿ ಮನೆಗೆ ಮರಳುತ್ತಿದ್ದ ವೇಳೆ ಒಮ್ನಿ ಕಾರಿನಲ್ಲಿ ಬಂದ ಆಕೆಯ ಸ್ನೇಹಿತನ  ಗ್ಯಾಂಗ್ ಯುವತಿಯನ್ನ ಕಿಡ್ನ್ಯಾಪ್ ಮಾಡಿ ಸ್ನೇಹಿತನಿಗೊಪ್ಪಿಸಿದ್ದಾರೆ. ಆಗ ಆತ ಆಕೆಯ ಬಳಿ ಪ್ರೀತಿಸುವಂತೆ ಒತ್ತಾಯ ಮಾಡಿದ್ದಾನೆ. ಅಲ್ಲದೆ ಪೆಪ್ಪರ್ ಸ್ಪ್ರೇ ಮಾಡಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.


ಆಗ ಯುವತಿ ಕಾರಿನ ಡೋರ್ ತೆಗೆದು  ಎಸ್ಕೇಪ್ ಆಗಿ, ಅಲ್ಲೇ ಸಮೀಪದಲ್ಲಿದ್ದ ಆಟೋ ಚಾಲಕರ ನೆರವಿನಿಂದ ತನ್ನ ತಾಯಿಗೆ ಕರೆ ಮಾಡಿ ಸೇಫ್ ಆಗಿ ಮನೆ ಸೇರಿದ್ದಾಳೆ.


ಈ ಘಟನೆಗೆ ಸಂಬಂಧಿಸಿದಂತೆ ಯುವತಿಯ ಪೋಷಕರು ಬಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು‌ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಫೇಸ್ ಬುಕ್ ಗೆಳೆಯನ ಜೊತೆ ಓಡಿಹೋಗಲು ತಾಯಿ ತಡೆದದ್ದಕ್ಕೆ ಮಗಳು ಮಾಡಿದ್ದೇನು ಗೊತ್ತಾ?