ಮೋದಿ, ಅಮಿತ್ ಶಾ ಬಗ್ಗೆ ವ್ಯಂಗ್ಯವಾಡಿದ ಸಿದ್ದರಾಮಯ್ಯ

ಮಂಗಳವಾರ, 25 ಡಿಸೆಂಬರ್ 2018 (10:50 IST)
ಬೆಂಗಳೂರು : ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಸೋಲನುಭವಿಸಿದ ಹಿನ್ನಲೆಯಲ್ಲಿ ಇನ್ನುಮುಂದೆ ದೇಶದಲ್ಲಿ ಮೋದಿಯ ಮೋಡಿ ಹಾಗೂ ಅಮಿತ್ ಶಾ ಮ್ಯಾಜಿಕ್ ಎಲ್ಲವೂ ಬರಿ ಕನಸಷ್ಟೇ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.


ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿ, ‘ಪಂಚರಾಜ್ಯ ಚುನಾವಣೆಯಲ್ಲಿ ಸೋಲನ್ನು ಕಂಡಿರುವ ಬಿಜೆಪಿಗೆ ರಾಷ್ಟ್ರದಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೋರಾಡಬೇಕಾದ ದುಸ್ಥಿತಿ ಬಂದಿದೆ. ದೇಶದಲ್ಲಿ ಪ್ರಧಾನಿ ಮೋದಿಯವರ ವರ್ಚಸ್ಸು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಹೀಗಾಗಿ ಇನ್ನುಮುಂದೆ ದೇಶದಲ್ಲಿ ಮೋದಿಯ ಮೋಡಿ ಹಾಗೂ ಅಮಿತ್ ಶಾ ಮ್ಯಾಜಿಕ್ ಎಲ್ಲವೂ ಬರಿ ಕನಸಷ್ಟೇ’ ಎಂದು ಹೇಳಿದ್ದಾರೆ.


‘ಈಗಾಗಲೇ ಕಾಂಗ್ರೆಸ್ ಜಯಗಳಿಸಿರುವ ರಾಜ್ಯಗಳಲ್ಲಿ ರೈತರ ಸಾಲಮನ್ನಾ ಘೋಷಣೆ ಮಾಡಲಾಗಿದೆ. ಈ ಹಿಂದೆ ಅಧಿಕಾರಕ್ಕೆ ಬಂದರೇ, ದೇಶದ ರೈತರ ಸಾಲಮನ್ನಾ ಮಾಡುವುದಾಗಿ ಹೇಳಿದ್ದ ಬಿಜೆಪಿ, ರಾಷ್ಟ್ರದಲ್ಲಿ ಅಧಿಕಾರಕ್ಕೆ ಬಂದು ನಾಲ್ಕೂವರೆ ವರ್ಷಗಳಾದರೂ ಬಡ ರೈತರ ಕಡೆಗೆ ಕಣ್ಣೆತ್ತಿಯೂ ನೋಡುತ್ತಿಲ್ಲ. ಬಡವರ ಕಷ್ಟಕ್ಕೆ ಮಿಡಿಯದ ಈ 56 ಇಂಚಿನ ಎದೆಯಿದ್ದು ಏನು ಉಪಯೋಗ’ವೆಂದು ಕಿಡಿಕಾರಿದ್ದಾರೆ.


‘ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲುವುದು ಎಷ್ಟು ಸತ್ಯವೋ, ರಾಹುಲ್ ಗಾಂಧಿ ಪ್ರಧಾನಿಯಾಗುವುದು ಅಷ್ಟೇ ಸತ್ಯ’ ಎಂದು ಅವರು ಭವಿಷ್ಯ ನುಡಿದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಡಿಸೆಂಬರ್ 25-28ರವರೆಗೆ ಕೆ.ಎಸ್.ಐ.ಸಿ. ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಹಾಗೂ ಮಾರಾಟ ಮೇಳ