Select Your Language

Notifications

webdunia
webdunia
webdunia
webdunia

ದೇವರ ಮನೆಯಲ್ಲಿ ಈ 5 ವಸ್ತುಗಳಿದ್ದರೆ ಮನೆಗೆ ಶ್ರೇಯಸ್ಸು

ದೇವರ ಮನೆಯಲ್ಲಿ ಈ 5 ವಸ್ತುಗಳಿದ್ದರೆ ಮನೆಗೆ ಶ್ರೇಯಸ್ಸು
ಬೆಂಗಳೂರು , ಮಂಗಳವಾರ, 25 ಡಿಸೆಂಬರ್ 2018 (11:22 IST)
ಬೆಂಗಳೂರು : ಪ್ರತಿಯೊಬ್ಬರ ಮನೆಯಲ್ಲಿ ದೇವರ ಕೋಣೆ ಇದ್ದೇ ಇರುತ್ತದೆ. ಅಲ್ಲಿ ಪ್ರತಿದಿನ ಪೂಜೆ ಮಾಡುತ್ತಾರೆ. ಆದ್ದರಿಂದ ಪೂಜೆಗೆ ಬೇಕಾದ ಎಲ್ಲಾ ಸಾಮಾಗ್ರಿಗಳು ದೇವರ ಮನೆಯಲ್ಲಿರುತ್ತದೆ. ಆದರೆ ಶಾಸ್ತ್ರದ ಪ್ರಕಾರ ಪೂಜೆ ಮಾಡುವ ಸ್ಥಳದಲ್ಲಿ 5 ವಸ್ತುಗಳು ಇರಲೇಬೇಕು. ಇವು ಇದ್ದಲ್ಲಿ ಮಾತ್ರ ನಿಮಗೆ ಹಣಕಾಸಿನ ಸಮೃದ್ಧಿ ದೊರೆಯುತ್ತದೆಯಂತೆ.


ಗಂಟೆ : ಗಂಟೆಯ ಸದ್ದು ಮನೆಯಲ್ಲಿ ಸಕಾರಾತ್ಮಕತೆಯನ್ನು ಪಸರಿಸುತ್ತದೆ. ಸೂಕ್ಷ್ಮಜೀವಿಗಳನ್ನು ಕೊಲ್ಲುತ್ತದೆ. ಹಾಗಾಗಿ ಪೂಜೆಯ ಸ್ಥಳದಲ್ಲಿ ಗಂಟೆಯನ್ನು ಇಟ್ಟುಕೊಳ್ಳಬೇಕಂತೆ.



ಕಲಶ : ಇದು ಏಳಿಗೆಯ ಸಂಕೇತ. ನೀವು ಕಲಶವನ್ನು ಇಡುವ ಸ್ಥಳದಲ್ಲಿ ಕುಂಕುಮದಿಂದ 8 ಎಸಳುಗಳ ಕಮಲದ ಹೂವನ್ನು ಬಿಡಿಸಿ. ಇದರಿಂದ ಕುಟುಂಬದಲ್ಲಿ ಸಂತೋಷ ಹೆಚ್ಚುತ್ತದೆ.


ಸ್ವಸ್ಥಿಕ್ : ಇದು ಶಕ್ತಿಯ ಸಂಕೇತ. ಅದೃಷ್ಟ ಮತ್ತು ಆರೋಗ್ಯಕ್ಕೂ ಇದು ಪೂರಕವಾಗಿದೆ. ಹಾಗಾಗಿ ಲೋಹದ ಸ್ವಸ್ಥಿಕ್ ಒಂದನ್ನು ಸದಾ ನಿಮ್ಮ ದೇವರ ಕೋಣೆಯಲ್ಲಿ ಇಟ್ಟುಕೊಳ್ಳಿ.


ಶಂಖ : ಸಮುದ್ರ ಮಥನದ ಸಂದರ್ಭದಲ್ಲಿ ಉದ್ಭವಿಸಿದ ಲಕ್ಷ್ಮಿಯ ಆಭರಣ ಶಂಖ. ಲಕ್ಷ್ಮಿಗೆ ಶಂಖ ಅತ್ಯಂತ ಪ್ರಿಯವಾದದ್ದು. ಹಾಗಾಗಿ ಪೂಜಾ ಸ್ಥಳದಲ್ಲಿ ಅದನ್ನು ಇಟ್ಟರೆ ಒಳಿತಾಗುತ್ತದೆ.


ಮಣ್ಣಿನ ದೀಪ : ದೇವರ ಕೋಣೆಯಲ್ಲಿ ಮಣ್ಣಿನ ದೀಪವನ್ನಿಡುವುದು ಅತ್ಯಂತ ಶ್ರೇಷ್ಠ. ಇದರಿಂದ ದೀಪ ಬೆಳಗಿದರೆ ಮನೆಗೆ ಶ್ರೇಯಸ್ಸು ಉಂಟಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?