ಬಾನಂಗಳದಲ್ಲಿ ಹಾರ್ನ್​ಬಿಲ್​ಗಳ ಕಾದಾಟ

Webdunia
ಬುಧವಾರ, 4 ಜನವರಿ 2023 (18:19 IST)
ತಮಿಳುನಾಡಿನ ನೆಲ್ಲಿಯಂಪತಿ, ವಾಲ್ಪಾರೈಗೆ ಹಾರ್ನ್​ಬಿಲ್​ಗಳು ವಲಸೆಗೆ ಬಂದಿದ್ದು. ಈ ಹಾರ್ನ್​ಬಿಲ್​ಗಳು ಕಾದಾಡುತ್ತಿವೆಯೋ, ಕಲಾತ್ಮಕವಾಗಿ ಹಾರಾಡುತ್ತಿವೆಯೋ ಎಂಬ ಸುಂದರವಾದ ಗೊಂದಲ ನೆಟ್ಟಿಗರಲ್ಲಿ ಮೂಡಿದೆ. IAS​ ಅಧಿಕಾರಿ ಸುಪ್ರಿಯಾ ಸಾಹು ತಮಿಳುನಾಡಿನಲ್ಲಿ ಪರಿಸರ ಹವಾಮಾನ ಬದಲಾವಣೆ ಮತ್ತು ಅರಣ್ಯ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು ಆಗಾಗ ವನ್ಯಜೀವಿಗಳ ಕುರಿತು ಟ್ವೀಟ್ ಮಾಡುತ್ತಿರುತ್ತಾರೆ. ಈ ಸಲ ಅವರು ಟ್ವೀಟ್ ಮಾಡಿದ ಈ ವಿಡಿಯೋದಲ್ಲಿ ಹಾರ್ನ್​ಬಿಲ್​ಗಳು ಆಕಾಶದಲ್ಲಿ ಆಕ್ರಮಣಕಾರಿಯಾಗಿ ದಾಳಿಯಲ್ಲಿ ತೊಡಗಿಕೊಂಡಿವೆ. ಪ್ರತೀ ವರ್ಷವೂ ತಮಿಳುನಾಡಿನ ನೆಲ್ಲಿಯಂಪತಿ ಮತ್ತು ವಾಲ್ಪಾರೈನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೂರಾರು ಹಾರ್ನ್​ಬಿಲ್​ಗಳು ವಲಸೆಗೆ ಬರುತ್ತವೆ. ನೀಲಾಕಾಶದ ಹಿನ್ನೆಲೆಯಲ್ಲಿ ಹೀಗೆ ಅವು ರೆಕ್ಕೆ ಬಿಚ್ಚಿ ಹಾರುವುದನ್ನು ನೋಡುವುದೇ ಅದ್ಭುತ ಅನುಭವ. ಬಹುವರ್ಣಗಳಲ್ಲಿ ವಿನ್ಯಾಸಗೊಂಡಿರುವ ಅವುಗಳ ಗರಿಗಳಂತೂ ನಯನ ಮನೋಹರ. ಆದರೆ ಈ ವಿಡಿಯೋದಲ್ಲಿ ಮಾತ್ರ ಈ ಚೆಂದುಳ್ಳಿಗಳು ಯಾಕೋ ಎಂತೋ ಅಂತೂ ಕಾದಾಟಕ್ಕಿಳಿದಿವೆ. ಈ ವಿಡಿಯೋವನ್ನು ಸಾವಿರಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮಾಜಿ ಪ್ರಧಾನಿ ಎಚ್ ದೇವೇಗೌಡರ ಆರೋಗ್ಯದ ಬಗ್ಗೆ ಕುಮಾರಸ್ವಾಮಿಯಿಂದ ಬಿಗ್‌ ಅಪ್ಡೇಟ್‌

17 ಮಕ್ಕಳು ಸಾವು ಪ್ರಕರಣ: ಕೆಮ್ಮಿನ ಮೂರು ಸಿರಪ್ ತಯಾರಿಕೆಗೆ ಬ್ರೇಕ್‌

ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಿಕೆ ಶಿವಕುಮಾರ್

ಶೂ ಎಸೆದ ಪ್ರಕರಣ: ನನ್ನ ಸಹೋದರನಿಗೆ ತುಂಬಾನೇ ನೋವಾಗಿದೆ ಎಂದ ಸಿಜೆಐ

ಮೈಸೂರು ರೇಪ್ ಆಂಡ್ ಮರ್ಡರ್ ಕೇಸ್‌: ಆರೋಪಿಯ ಗುರುತು ಕೊನೆಗೂ ಪತ್ತೆ

ಮುಂದಿನ ಸುದ್ದಿ
Show comments