Publish Date: Fri, 04 May 2018 (17:14 IST)
Updated Date: Fri, 04 May 2018 (17:16 IST)
ಶ್ರೀರಂಗಪಟ್ಟಣ ತಾಲ್ಲೂಕಿನ ಅರಕೆರೆ ಗ್ರಾಮದಲ್ಲಿ ಜೆಡಿಎಸ್ ಅಭ್ಯರ್ಥಿಯಾದ ರವೀಂದ್ರ ಶ್ರೀಕಂಠಯ್ಯಗೆ ಬೃಹತ್ ಆ್ಯಪಲ್ ಹಾರ ಮಾಲಾರ್ಪಣೆ ಮಾಡಲಾಗಿದೆ.
ರವೀಂದ್ರ ಶ್ರೀಕಂಠಯ್ಯ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಗೆ ಅದ್ದೂರಿ ಸ್ಚಾಗತ ಮಾಡಿದ ಅರಕೆರೆ ಗ್ರಾಮಸ್ಥರು 7 ಟನ್ ತೂಕದ ಸೇಬಿನ ಹಾರ ಮಾಲಾರ್ಪಣೆ ಮಾಡಿ ಹೃದಯಪೂರ್ವಕ ಸ್ವಾಗತ ಕೋರಿದರು.
ಅರಕೆರೆ ಗ್ರಾಮ ರವೀಂದ್ರ ಶ್ರೀಕಂಠಯ್ಯ ತವರೂರು. ತವರೂರಿಗೆ ಚುನಾವಣಾ ಪ್ರಚಾರಕ್ಕೆ ಬಂದಿದ್ದ ರವೀಂದ್ರ ಶ್ರೀಕಂಠಯ್ಯ ಸಾವಿರಾರು ಜೆಡಿಎಸ್ ಕಾರ್ಯಕರ್ತರಿಂದ ಅಭೂತಪೂರ್ವ ಸ್ವಾಗತ ದೊರೆತಿದ್ದಲ್ಲದೇ ಇದೇ ವೇಳೆ ಬೆಳಗೊಳ ಗ್ರಾ.ಪ ಅಧ್ಯಕ್ಷೆ ಮುಂಜುಳಮ್ಮ ಚುನಾವಣಾ ಖರ್ಚಿಗಾಗಿ ರವೀಂದ್ರ ಶ್ರೀಕಂಠಯ್ಯ ಪತ್ನಿಗೆ 1.05 ಲಕ್ಷ ರೂ ದೇಣಿಗೆ ನೀಡಿ ಔದಾರ್ಯತೆಯನ್ನು ಮೆರೆದಿದ್ದಾರೆ.