Select Your Language

Notifications

webdunia
webdunia
webdunia
webdunia

ಜೆಡಿಎಸ್ ಅಭ್ಯರ್ಥಿ ಪರ ಸಂಸದ ಸಿ.ಎಸ್.ಪುಟ್ಟರಾಜು ಅಬ್ಬರದ ಪ್ರಚಾರ

ಜೆಡಿಎಸ್
ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪರ, ಸಂಸದ ಸಿ.ಎಸ್.ಪುಟ್ಟರಾಜು ಅಬ್ಬರದ ಪ್ರಚಾರ ಮಾಡಿದರು. 
ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ತಾಳಶಾಸನ, ಚಿಕ್ಕಬ್ಯಾಡರಹಳ್ಳಿ, ದೊಡ್ಡಬ್ಯಾಡರಹಳ್ಳಿ, ಚಿಕ್ಕಾಡೆ, ಕಾಳೇನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಸಿ.ಎಸ್.ಪುಟ್ಟರಾಜು ಮನೆ ಮೆನೆಗೆ ತೆರಳಿ ಮತಯಾಚನೆ ಮಾಡಿದರು. 
 
ಈ ವೇಳೆ ಜೆಡಿಎಸ್ ಮುಖಂಡರು ಪುಟ್ಟರಾಜು ಅವ್ರಿಗೆ ಸಾಥ್ ನೀಡಿದ್ರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಿ.ಎಸ್.ಪುಟ್ಟರಾಜು, ಮಂಡ್ಯ ಜಿಲ್ಲೆ ಜೆಡಿಎಸ್ ಭದ್ರಕೋಟೆಯಾಗಿದ್ದು, ಜಿಲ್ಲೆಯ 7 ಕ್ಷೇತ್ರಗಳಲ್ಲಿ ಮಂಡ್ಯ ಜೆಡಿಎಸ್ ಅಭ್ಯರ್ಥಿಗಳನ್ನ ಗೆಲ್ಲಿಸಲು ಜನ್ರು ತುದಿಗಾಲಲ್ಲಿ ನಿಂತಿದ್ದಾರೆ. 
 
ಮೇಲುಕೋಟೆ ಕ್ಷೇತ್ರದ ಜನ್ರು ಅತ್ಯಂತ ಪ್ರೀತಿ ತೋರಿಸುತ್ತಿದ್ದು, ಈ ಬಾರಿ ನನ್ನನ್ನು ಅತ್ಯಂತ ಹೆಚ್ಚು ಮತಗಳ ಅಂತರದಲ್ಲಿ ಗೆಲ್ಲಿಸಿಕೊಡಲಿದ್ದಾರೆ ಎಂದು ಹೇಳಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ದಲಿತರಿಗೆ ದೇವಸ್ಥಾನ ಪ್ರವೇಶ ನಿಷೇಧ: ಸವರ್ಣೀಯರ ಬಂಧನ