Publish Date: Thu, 23 Jul 2020 (17:55 IST)
Updated Date: Thu, 23 Jul 2020 (17:56 IST)
ಬಿಜೆಪಿ ನೇತೃತ್ವದ ರಾಜ್ಯ ಸರಕಾರದ ವಿರುದ್ಧ ಮಾಜಿ ಸಿಎಂ ಸಾವಿರಾರು ಕೋಟಿ ರೂಪಾಯಿ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ.
ಕೊರೊನಾ ತಡೆಗೆ ಅಂತ ಖರೀದಿಸಲಾಗಿರುವ ಉಪಕರಣಗಳ ಖರೀದಿಯಲ್ಲಿ 2000 ಕೋಟಿ ರೂಪಾಯಿಗಳ ಹಗರಣ ನಡೆಸಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಸಿಎಂ ಈವರೆಗೆ 324 ಕೋಟಿ ಖರ್ಚಾಗಿದೆ ಅಂತಾರೆ. ಆದರೆ ನನಗೆ ಬಂದಿರುವ ಮಾಹಿತಿ ಪ್ರಕಾರ ಕಾರ್ಮಿಕ ಇಲಾಖೆ 1 ಸಾವಿರ ಕೋಟಿ ರೂ., ಆರೋಗ್ಯ ಇಲಾಖೆ 700 ಕೋಟಿ ರೂ., ವೈದ್ಯಕೀಯ ಶಿಕ್ಷಣ ಇಲಾಖೆ 815 ಕೋಟಿ ರೂ. ಖರ್ಚು ಮಾಡಿದೆ.
ಆದರೆ ಯಾರೊಬ್ಬರೂ ಖರ್ಚಿನ ಕುರಿತು ಹಾಗೂ ಖರೀದಿ ಹಗರಣದ ಕುರಿತು ಸರಿಯಾದ ಮಾಹಿತಿ ನೀಡುತ್ತಿಲ್ಲ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.