Publish Date: Thu, 23 Jul 2020 (15:50 IST)
Updated Date: Thu, 23 Jul 2020 (15:51 IST)
ಚೆನ್ನೈ : 90ರ ದಶಕದಲ್ಲಿ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ದಕ್ಷಿಣ ಭಾರತದ ಖ್ಯಾತ ನಟ ಶಕೀಲಾ ಆಸ್ಪತ್ರೆಗೆ ದಾಖಲಾಗಿದ್ದು, ಅಲ್ಲಿಂದಲ್ಲೇ ತಮ್ಮ ಅಭಿಮಾನಿಗಳಲ್ಲಿ ಮನವಿವೊಂದನ್ನು ಮಾಡಿದ್ದಾರೆ.
45 ವರ್ಷ ವಯಸ್ಸಿನ ನಟಿ ಶಕೀಲಾ ಅವರು ಅನಾರೋಗ್ಯದ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆಯಿಂದಲ್ಲೇ ಅವರೊಂದು ವಿಡಿಯೋವೊಂದನ್ನು ಹರಿಬಿಟ್ಟಿದ್ದಾರೆ. ಅದರಲ್ಲಿ ತಾವು ಆಸ್ಪತ್ರೆಗೆ ದಾಖಲಾಗಿದ್ದು, ಅಭಿಮಾನಿಗಳು ಆತಂಕಪಡಬೇಡಿ ಎಂದು ತಿಳಿಸಿದ್ದಾರೆ.
ಅಲ್ಲದೇ ಅನಾರೋಗ್ಯದ ಹಿನ್ನಲೆ ತಮ್ಮ ನಿರ್ಮಾಣದ ಸಿನಿಮಾ ‘ಲೇಡಿಸ್ ನಾಟ್ ಅಲೌಡ್’ ಪ್ರಚಾರ ಮಾಡಲಾಗುತ್ತಿಲ್ಲ.ಆದಕಾರಣ ತಮ್ಮ ಸಿನಿಮಾವನ್ನು ಎಲ್ಲರೂ ನೋಡಬೇಕೆಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.