Select Your Language

Notifications

webdunia
webdunia
webdunia
webdunia

200ಕೋಟಿ ಪ್ರಕರಣ ಟ್ವಿಸ್ಟ್

Crime
ಬೆಂಗಳೂರು , ಸೋಮವಾರ, 20 ಡಿಸೆಂಬರ್ 2021 (16:01 IST)
ಬೆಂಗಳೂರು ಮೂಲದ ವಂಚಕ ಸುಕೇಶ್ ಚಂದ್ರಶೇಖರ್‌ ಜೊತೆ ಸಿನಿಮಾ ಲೋಕದ ಸೆಲೆಬ್ರಿಟಿಗಳ ಸಂಪರ್ಕ ಇರುವುದು ಗುಟ್ಟಾದ ವಿಷಯವೇನಲ್ಲ. ಆದರೆ, ಈಗ 200 ಕೋಟಿ ವಂಚನೆ ಪ್ರಕರಣದ ಆರೋಪಿ ಸುಕೇಶ್ ಜೊತೆ ಸಂಪರ್ಕ ಹೊಂದಿರುವ ಎಲ್ಲಾ ಸೆಲೆಬ್ರಿಟಿಗಳನ್ನು ವಿಚಾರಣೆ ನಡೆಸಲು ಜಾರಿ ನಿರ್ದೇಶನಾಲಯ ಮುಂದಾಗಿರುವ ಸುದ್ದಿ ಬಂದಿದೆ.ಕಳೆದ ತಿಂಗಳು ಈ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಲಂಕಾ ಮೂಲದ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ರನ್ನು 7 ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿತ್ತು. ಸುಕೇಶ್ ಚಂದ್ರಶೇಖರ್ ಹಾಗೂ ಆತನ ಪತ್ನಿ ನಟಿ ಲೀನಾ ಮರಿಯಾ ಪೌಲ್ ಉದ್ಯಮಿಯಿಂದ 200 ಕೋಟಿ ಲೂಟಿ ಮಾಡಿದ ಪ್ರಕರಣವನ್ನು ಎದುರಿಸುತ್ತಿದ್ದಾರೆ. ಸುಕೇಶ್ ಹಾಗೂ ನಟಿ ಜಾಕ್ವೆಲಿನ್​ ಫರ್ನಾಂಡಿಸ್ ನಡುವೆ ಯಾವುದೇ ರೀತಿಯ ಅಕ್ರಮ ಹಣಕಾಸಿನ ವಹಿವಾಟು ನಡೆದಿದೆಯೇ ಎಂದು ತನಿಖೆ ನಡೆಸಲಾಗುತ್ತಿದೆ.
 
ಸುಕೇಶ್ ಚಂದ್ರಶೇಖರ್ ತಿಹಾರ್ ಜೈಲಿನಿಂದ ಏಪ್ರಿಲ್-ಜೂನ್‌ನಲ್ಲಿ ಮಧ್ಯಂತರ ಜಾಮೀನು ಪಡೆದು ಹೊರ ಬಂದಿದ್ದ. ಈ ವೇಳೆ ಜಾಕ್ವಲಿನ್‌ಗೆ ಮುತ್ತಿಟ್ಟು ಕನ್ನಡಿ ಮುಂದೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದು ವೈರಲ್ ಆಗಿತ್ತು. ತಿಹಾರ್ ಜೈಲಿನೊಳಗಿದ್ದುಕೊಂಡೇ ಜಾಕ್ವೆಲಿನ್‍ ಜೊತೆ ಪೋನ್ ಮೂಲಕ ಮಾತಾಡುತ್ತಿದ್ದ. ಾತನನ್ನು ನೋಡಲು ಡಜನ್ ಗಟ್ಟಲೇ ನಟಿಯರು ಬಂದಿದ್ದರು ಎಂಬ ಮಾಹಿತಿ ಬಹಿರಂಗವಾಗಿದೆ. ಜೈಲಿನೊಳಗೆ ಇದ್ದುಕೊಂಡೇ ಐಷಾರಾಮಿ ಉಡುಗೊರೆಗಳನ್ನು ನಟಿಗೆ ಕಳುಹಿಸಿಕೊಡುತ್ತಿದ್ದ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನಿಂದ ಮಹಾರಾಷ್ಟ್ರ ಸರಕುಗಳು ಬ್ಯಾನ್..!!