Select Your Language

Notifications

webdunia
webdunia
webdunia
webdunia

ಮತ್ತೆ ಭೀಕರ ಅನಾಹುತ: ದೇವರ ಪ್ರಸಾದ ಸೇವಿಸಿ 18 ಮಂದಿ ಗಂಭೀರ

ದೇವರ ಪ್ರಸಾದ
ದೇವರ ಪ್ರಸಾದ ಸೇವಿಸಿದ್ದ ಜನರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ. ದೇವರ ಪ್ರಸಾದ ಸೇವಿಸಿ 18 ಮಂದಿ ಭಕ್ತರು ಅಸ್ವಸ್ಥರಾಗಿದ್ದಾರೆ.

ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕಳ್ಳಂಬೆಳ್ಳ ಹೋಬಳಿ ಚಿನ್ನಪ್ಪನಹಳ್ಳಿಯಲ್ಲಿ ಈ ಘಟನೆ ನಡೆದಿದೆ.

ಆಂಜನೇಯ ಸ್ವಾಮಿ ಹರಿಸೇವೆ ಕಾರ್ಯಕ್ರಮವಿತ್ತು. ಕಾರ್ಯಕ್ರಮದ ನಂತರ ಅನ್ನ, ಸಾರು, ಪಲ್ಯ ವಿತರಣೆ ಮಾಡಲಾಗಿತ್ತು.
ಇಂದು ಬೆಳಗ್ಗೆ 9 ಗಂಟೆಯ ಸುಮಾರಿಗೆ ಗ್ರಾಮಸ್ಥರು ಅಸ್ಪಸ್ಥರಾಗಿದ್ದಾರೆ. 18 ಕ್ಕೂ‌ ಹೆಚ್ಚು ಜನರನ್ನ  ಶಿರಾ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಪೊಲೀಸ್ ಪೇದೆಯನ್ನೇ ಥಳಿಸಿದ ಕುಡುಕರು