Publish Date: Thu, 07 Mar 2019 (15:31 IST)
Updated Date: Thu, 07 Mar 2019 (15:34 IST)
ಭಕ್ತರ ಪರಾಕಾಷ್ಠೆಗೆ ಮಿತಿ ಎಂಬುದಿಲ್ಲ. ಸಹಸ್ರಾರು ಭಕ್ತರು ಬೆಂಕಿಯ ಕೊಂಡ ಹಾಯ್ದು ಭಕ್ತಿ ಸಮರ್ಪನೆ ಮಾಡಿದ್ದಾರೆ.
ಇತಿಹಾಸ ಪ್ರಸಿದ್ಧ ಕೋರವಾರ ಅಣಿವೀರಭದ್ರೇಶ್ವರ ಜಾತ್ರಾ ಮಹೋತ್ಸವ ಸಡಗರದಿಂದ ನಡೆಯುತ್ತಿದೆ. ಕಲಬುರಗಿ ಜಿಲ್ಲೆ ಕಾಳಗಿ ತಾಲೂಕಿನ ಕೋರವಾರದಲ್ಲಿ ನಡೆಯುತ್ತಿರುವ ಜಾತ್ರೆಗೆ ಸಹಸ್ರಾರು ಭಕ್ತರು ಸಾಕ್ಷಿಯಾಗಿದ್ದಾರೆ.
ತಡರಾತ್ರಿ ಕೊಂಡ ತುಳಿದು ಭಕ್ತಿ ಅರ್ಪಿಸಿದ ಪುರವಂತರು, ಸಹಸ್ರಾರು ಭಕ್ತರು ಧನ್ಯತಾ ಭಾವ ಮೆರೆದರು. ಇಂದು ರಾತ್ರಿ 9 ಗಂಟೆಗೆ ನಡೆಯಲಿರುವ ಭವ್ಯವಾದ ರಥೋತ್ಸವದಲ್ಲಿ ಪಾಲ್ಗೊಳ್ಳಲು ಕರ್ನಾಟಕ, ಆಂಧ್ರ, ಮಹಾರಾಷ್ಟ್ರ ಸೇರಿ ಹಲವಡೆಯಿಂದ ಹರಿದುಬಂದ ಭಕ್ತಸಾಗರ ಪಾಲ್ಗೊಳ್ಳಲಿದೆ.