Publish Date: Fri, 01 Mar 2019 (20:14 IST)
Updated Date: Fri, 01 Mar 2019 (20:17 IST)
ಭಕ್ತಿಯೇ ಹಾಗೆ ಒಮ್ಮೆ ಭಕ್ತರನ್ನು ಮತ್ತೊಮ್ಮೆ ನೋಡುಗರನ್ನು ಚಕಿತಗೊಳಿಸುತ್ತದೆ. ಭಕ್ತನೊಬ್ಬ ಬೆನ್ನುಹುರಿಗೆ ಸರಳು ಚುಚ್ಚಿಕೊಂಡು ಕಿಲೋ ಮೀಟರ್ ಗಟ್ಟಲೇ ನೇತಾಡಿದ ಘಟನೆ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟ ರಸ್ತೆಯಲ್ಲಿನ ವಡಕೆಹಳ್ಳದಲ್ಲಿ ಈ ಘಟನೆ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದ ಮಾರಿಹಬ್ಬದಲ್ಲಿ ಭಕ್ತರು ತಮ್ಮ ಬೇಡಿಕೆಗಳನ್ನು ಈಡೇರಿಸಿದ್ದಕ್ಕಾಗಿ ದೇವಿಗೆ ಹರಕೆ ತೀರಿಸಿದರು. ಈ ವೇಳೆ ಭಕ್ತರೊಬ್ಬರು ಬೆನ್ನುಹುರಿಗೆ ಕಬ್ಬಿಣದ ಕೊಂಡಿ ಚುಚ್ಚಿಕೊಂಡು ಬೊಲೆರೊ ವಾಹನದಲ್ಲಿ ಕಟ್ಟಿದ್ದ ಕಂಬದಲ್ಲಿ ನೇತಾಡುತ್ತ ಎಲ್ಲರನ್ನು ರೋಮಾಂಚನಗೊಳಿಸಿದರು.
ಹಲವಾರು ಮೀಟರ್ ಗಟ್ಟಲೆ ಉದ್ದದ ಸರಳುಗಳನ್ನು ಬಾಯಿ ಬೀಗ ಮಾಡಿಕೊಂಡಿದ್ದರು. ಹನೂರು ತಾಲ್ಲೂಕಿನ ವಡಕೆಹಳ್ಳ ಗ್ರಾಮದ ಜನರ ಭಕ್ತಿಯ ಪರಾಕಾಷ್ಠತೆ ನೋಡುಗರನ್ನು ಬೆಚ್ಚಿ ಬೀಳಿಸಿದ್ದಂತೂ ಸುಳ್ಳಲ್ಲ.