Select Your Language

Notifications

webdunia
webdunia
webdunia
webdunia

ಸನ್ನಿ ಲಿಯೋನಾಗೆ ದೇವರ ಬಗ್ಗೆ ಭಕ್ತಿ ಹುಟ್ಟಲು ಇವರೇ ಕಾರಣವಂತೆ

ಸನ್ನಿ ಲಿಯೋನಾಗೆ ದೇವರ ಬಗ್ಗೆ ಭಕ್ತಿ ಹುಟ್ಟಲು ಇವರೇ ಕಾರಣವಂತೆ
ಮುಂಬೈ , ಭಾನುವಾರ, 16 ಸೆಪ್ಟಂಬರ್ 2018 (06:28 IST)
ಮುಂಬೈ : ಸಾಮಾನ್ಯವಾಗಿ ಸೆಲೆಬ್ರಿಟಿಗಳು ದೇವರನ್ನು ನಂಬುವುದಿಲ್ಲ. ಆದರೆ ಬಾಲಿವುಡ್ ನಟಿ ಸನ್ನಿ ಲಿಯೋನಾ ಗೆ ಮಾತ್ರ  ದೇವರ ಮೇಲೆ ಅಪಾರವಾದ ನಂಬಿಕೆ ಇದ್ದು, ಇದಕ್ಕೆ  ಕಾರಣ ಒಬ್ಬರು ವಿಶೇಷವಾದ ವ್ಯಕ್ತಿಯಂತೆ.


ಹೌದು. ಗಣೇಶ ಹಬ್ಬದಂದು ನಟಿ ಸನ್ನಿ ಲಿಯೋನಾ ಹೊಸ ಮನೆಗೆ ಪ್ರವೇಶಿಸಿ ಗಣೇಶ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ಈ ವೇಳೆ ಸನ್ನಿ ಅವರ ಮಗಳು ನಿಶಾ ಕೌರ್ ವೆಬ್ಬರ್ ತನ್ನ ತಂದೆ ತಾಯಿಯ ಹಣೆಗೆ ಕುಂಕುಮ ಹಚ್ಚುವ ಫೋಟೋವನ್ನು ಶುಕ್ರವಾರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.


ಜೊತೆಗೆ “ನಾನು ದೇವರನ್ನು ನಂಬುತ್ತೇನೆ ಎಂದರೆ ಅದಕ್ಕೆ ಆಕೆಯೇ ಕಾರಣ. ನಮ್ಮ ಜೀವನದಲ್ಲಿ ಆಕೆಯನ್ನು ಪಡೆಯಲು ನಾವು ಅದೃಷ್ಟ ಮಾಡಿದ್ದೇವೆ. ಆಕೆ ನಮಗೆ ಮುಟ್ಟಿದ್ದರೆ ಸ್ವತಃ ದೇವರೇ ತಮ್ಮ ಕೈಯಿಂದ ನಮ್ಮ ತಲೆ ಮುಟ್ಟಿ ಆಶೀರ್ವಾದ ಮಾಡಿದಂತೆ ಆಗುತ್ತದೆ. ನಿಶಾ ಕೌರ್ ವೆಬ್ಬರ್ ನಮಗೆ ಸ್ವರ್ಗದಿಂದ ಸಿಕ್ಕಿರುವ ಉಡುಗೊರೆ” ಎಂದು ಬರೆದು ಪೋಸ್ಟ್ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ನಟಿ ಮೇಘನಾ ರಾಜ್ ಕೈಯಲ್ಲಿರುವ ವಾಚ್ ಯಾರದ್ದು ಗೊತ್ತಾ?