Select Your Language

Notifications

webdunia
webdunia
webdunia
webdunia

ಕ್ರಿಕೆಟಿಗ ಗೌತಮ್ ಗಂಭೀರ್ ಸೀರೆಯುಟ್ಟು ಬಿಂದಿ ಇಟ್ಟುಕೊಂಡಿದ್ಯಾಕೆ?

ಕ್ರಿಕೆಟಿಗ ಗೌತಮ್ ಗಂಭೀರ್ ಸೀರೆಯುಟ್ಟು ಬಿಂದಿ ಇಟ್ಟುಕೊಂಡಿದ್ಯಾಕೆ?
ಮುಂಬೈ , ಶನಿವಾರ, 15 ಸೆಪ್ಟಂಬರ್ 2018 (06:50 IST)
ಮುಂಬೈ : ಟೀಂ ಇಂಡಿಯಾದ ಖ್ಯಾತ ಬ್ಯಾಟ್ಸ್ ಮನ್ ಗೌತಮ್ ಗಂಭೀರ್ ಇದೀಗ ನಾರಿಯಂತೆ ಸೀರೆಯುಟ್ಟು, ಬಿಂದಿ ಇಟ್ಟುಕೊಂಡು ಶೃಂಗಾರ ಮಾಡಿಕೊಳ್ಳುವುದರ ಮೂಲಕ ಅಚ್ಚರಿ ಮೂಡಿಸಿದ್ದಾರೆ.


ಅತ್ಯುತ್ತಮ ಬ್ಯಾಟಿಂಗ್ ಮೂಲಕ ಮಿಂಚಿದ ಕ್ರಿಕೆಟರ್ ಗೌತಮ್ ಗಂಭೀರ್ ಅಪಾರ ಅಭಿಮಾನಿಗಳ ಬಳಗವನ್ನೇ ಹೊಂದಿದ್ದಾರೆ. ಅಲ್ಲದೇ ಇವರು ಕ್ರಿಕೆಟ್ ನಲ್ಲಿ ಮಾತ್ರವಲ್ಲದೇ  ಸಾಮಾಜಿಕ ಕಾರ್ಯಗಳಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಜನಪರ ಕಾರ್ಯಗಳನ್ನು ಮಾಡುತ್ತಿದ್ದಾರೆ.


ಇದೀಗ ನವದೆಹಲಿಯಲ್ಲಿ ನಡೆದ 7ನೇ ಆವೃತ್ತಿಯ ಹಿಜಿರಾ ಹಬ್ಬದಲ್ಲಿ ಭಾಗವಹಿಸಿದ ಗೌತಮ್ ಗಂಭೀರ್ ಮಂಗಳಮುಖಿಯರನ್ನು ಬೆಂಬಲಿಸುವ ಸಲುವಾಗಿ ಸೀರೆ ಧರಿಸಿದ್ದಾರೆ. ಈ ಫೋಟೋ ಇದೀಗ ವೈರಲ್ ಆಗಿದೆ. ಹಾಗೇ ಸಮಾಜದಲ್ಲಿ ಮಂಗಳಮುಖಿಯರಿಗೆ ಸ್ಥಾನಮಾನ ಒದಗಿಸಿಕೊಡುವ ನಿಟ್ಟಿನಲ್ಲಿ ಬೆಂಬಲಕ್ಕೆ ನಿಲ್ಲುವುದಾಗಿ ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಧೋನಿ ಟೀಂ ಇಂಡಿಯಾ ನಾಯಕತ್ವ ತ್ಯಜಿಸಿದ್ದರ ನಿಜ ಕಾರಣ ಬಯಲು