Select Your Language

Notifications

webdunia
webdunia
webdunia
webdunia

ಸಲ್ಮಾನ್ ಖಾನ್ ‘ಧೂಮ್ 4’ ಚಿತ್ರದಿಂದ ಹೊರನಡೆಯಲು ಇವರೇ ಕಾರಣವಂತೆ!

ಸಲ್ಮಾನ್ ಖಾನ್ ‘ಧೂಮ್ 4’ ಚಿತ್ರದಿಂದ ಹೊರನಡೆಯಲು ಇವರೇ ಕಾರಣವಂತೆ!
ಮುಂಬೈ , ಶುಕ್ರವಾರ, 14 ಸೆಪ್ಟಂಬರ್ 2018 (12:15 IST)
ಮುಂಬೈ : ಬಾಲಿವುಡ್ ನಲ್ಲಿ  ‘ಧೂಮ್ 4’ ಚಿತ್ರದ ತಯಾರಿ ನಡೆಯುತ್ತಿದ್ದು, ಇದೀಗ ಈ ಚಿತ್ರದಲ್ಲಿ ನಟಿಸಬೇಕಾಗಿರುವ ನಟ ಸಲ್ಮಾನ್ ಖಾನ್ ಈ ಚಿತ್ರತಂಡದಿಂದ ಹೊರಬಂದಿದ್ದಾರಂತೆ.


ಹೌದು. ಬಾಲಿವುಡ್ ನ ‘ಧೂಮ್’ ಸಿನಿಮಾ ಸೂಪರ್ ಹಿಟ್ ಆದ ಮೇಲೆ ‘ಧೂಮ್ 2’, ‘ಧೂಮ್ 3’ ಚಿತ್ರಗಳನ್ನು ಕೂಡ ತೆಗೆಯಲಾಯಿತು. ಇದೀಗ 'ಧೂಮ್ 4' ಚಿತ್ರವನ್ನು ತೆಗೆಯಲು ಬಾಲಿವುಡ್ ನಿರ್ಧಾರ ಮಾಡಿದೆ.


ಆದರೆ ಈ ಚಿತ್ರದಲ್ಲಿ ನಟ  ಸಲ್ಮಾನ್ ಖಾನ್ ನಟಿಸಲಿದ್ದಾರೆ ಎನ್ನಲಾಗುತ್ತಿತ್ತು. ಆದರೆ, ಅವರು ಈ ಚಿತ್ರದಿಂದ ಹೊರಬಂದಿದ್ದಾರೆ. ನಾನು ಈ ಸಿನಿಮಾ ಮಾಡುವುದಿಲ್ಲವೆಂದು ಖಚಿತಪಡಿಸಿದ್ದಾರೆ. ಇದಕ್ಕೆ ಕಾರಣ ಅವರ ಮಾಜಿ ಪ್ರೇಯಸಿ ಐಶ್ವರ್ಯ ರೈ ಅವರ ಪತಿ ಅಭಿಷೇಕ್ ಬಚ್ಚನ್ ಎನ್ನಲಾಗುತ್ತಿದೆ. 'ಧೂಮ್-4' ಸಿನಿಮಾದಲ್ಲಿ ಸಲ್ಮಾನ್ ಮತ್ತು ಅಭಿಷೇಕ್ ಬಚ್ಚನ್ ಒಟ್ಟಿಗೆ ತೆರೆ ಹಂಚಿಕೊಳ್ಳಬೇಕಿತ್ತು. ಹಾಗಾಗಿ ಅವರು ಈ ನಿರ್ಧಾರ ಮಾಡಿದ್ದಾರಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ವಂಚಕ ರಘು ಮೇಲೆ ಕಿರುತೆರೆ ನಟಿಯಿಂದ ಹಲ್ಲೆ