Publish Date: Fri, 14 Sep 2018 (09:49 IST)
Updated Date: Fri, 14 Sep 2018 (09:50 IST)
ಮುಂಬೈ: ದುಬೈನಲ್ಲಿ ನಡೆಯಲಿರುವ ಏಷ್ಯಾ ಕಪ್ ಗಾಗಿ ಟೀಂ ಇಂಡಿಯಾ ಜತೆಗೆ ವಿಮಾನವೇರುವ ಮುನ್ನ ಮಾಜಿ ನಾಯಕ ಎಂಎಸ್ ಧೋನಿ ನಿಜ ಸಂಗತಿಯೊಂದನ್ನು ಬಯಲು ಮಾಡಿದ್ದಾರೆ.
ರಾಂಚಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಧೋನಿ ತಾನು ಏಕದಿನ ಕ್ರಿಕೆಟ್ ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರ ನಿಜ ಕಾರಣ ಬಯಲು ಮಾಡಿದ್ದಾರೆ.
‘2019 ರ ವಿಶ್ವಕಪ್ ಗೆ ವಿರಾಟ್ ಕೊಹ್ಲಿ ನಾಯಕರಾಗಿ ತಯಾರಾಗಲು ಸಮಯ ಬೇಕು. ಅವರಿಗೆ ಸಾಕಷ್ಟು ಸಮಯ ಒದಗಿಸಲು ನಾನು ನಾಯಕತ್ವ ಮೊದಲೇ ತ್ಯಜಿಸಿದೆ. ಒಬ್ಬ ಹೊಸ ನಾಯಕನಿಗೆ ಪ್ರಬಲ ತಂಡ ಕಟ್ಟಲು ಸಾಕಷ್ಟು ಸಮಯ ಬೇಕು. ಅದಕ್ಕಾಗಿಯೇ ನಾಯಕತ್ವ ತ್ಯಜಿಸಿದೆ’ ಎಂದು ಧೋನಿ ಬಹಿರಂಗಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.