Publish Date: Fri, 14 Sep 2018 (09:22 IST)
Updated Date: Fri, 14 Sep 2018 (09:26 IST)
ದುಬೈ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಭಾರತ ಕ್ರಿಕೆಟ್ ತಂಡದ ಹಂಗಾಮಿ ನಾಯಕ ರೋಹಿತ್ ಶರ್ಮಾ ನೇತೃತ್ವದ ಕ್ರಿಕೆಟಿಗರ ಗುಂಪು ದುಬೈಗೆ ಪ್ರಯಾಣ ಬೆಳೆಸಿದೆ.
ನಾಯಕ ರೋಹಿತ್ ಶರ್ಮಾ, ಎಂಎಸ್ ಧೋನಿ, ಯಜುವೇಂದ್ರ ಚಾಹಲ್, ಮನೀಶ್ ಪಾಂಡೆ ಸೇರಿದಂತೆ ಏಕದಿನ ಸ್ಪೆಷಲಿಸ್ಟ್ ಗಳ ತಂಡ ದುಬೈ ವಿಮಾನವೇರಿದೆ. ಇನ್ನು ಇಂಗ್ಲೆಂಡ್ ಸರಣಿಯಲ್ಲಿ ಪಾಲ್ಗೊಂಡಿದ್ದ ಕ್ರಿಕೆಟಿಗರು ನೇರವಾಗಿ ಅಲ್ಲಿಂದಲೇ ದುಬೈಗೆ ಆಗಮಿಸಲಿದ್ದಾರೆ.
ಇನ್ನು ಕೆಲವು ಆಟಗಾರರು ಬಳಿಕ ತಂಡವನ್ನು ಕೂಡಿಕೊಳ‍್ಳಲಿದ್ದಾರೆ ಎಂದು ಬಿಸಿಸಿಐ ಪ್ರಕಟಿಸಿದೆ. ಸೆಪ್ಟೆಂಬರ್ 18 ರಿಂದ ಹಾಂಗ್ ಕಾಂಗ್ ವಿರುದ್ಧದ ಪಂದ್ಯದಿಂದ ಟೀಂ ಇಂಡಿಯಾ ಏಷ್ಯಾ ಕಪ್ ಅಭಿಯಾನ ಆರಂಭವಾಗಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.