Select Your Language

Notifications

webdunia
webdunia
webdunia
webdunia

ನಟ ಆಯುಷ್ಮಾನ್ ಖುರಾನಾ ಕೂಡ ಕಾಸ್ಟಿಂಗ್ ಕೌಚ್ ಒಳಗಾಗಿದ್ದಾರಂತೆ!

ನಟ ಆಯುಷ್ಮಾನ್ ಖುರಾನಾ ಕೂಡ ಕಾಸ್ಟಿಂಗ್ ಕೌಚ್ ಒಳಗಾಗಿದ್ದಾರಂತೆ!
ಮುಂಬೈ , ಶುಕ್ರವಾರ, 14 ಸೆಪ್ಟಂಬರ್ 2018 (16:17 IST)
ಮುಂಬೈ: ಬಾಲಿವುಡ್‍ನ ನಟ  ಆಯುಷ್ಮಾನ್ ಖುರಾನಾ ‘ನಾನೂ ಒಮ್ಮೆ ಕಾಸ್ಟಿಂಗ್ ಕೌಚ್‍ಗೆ ಒಳಗಾಗಿದ್ದೆ’ ಎಂಬ ವಿಷಯವನ್ನು ಹೇಳಿದ್ದಾರೆ.


ಇತ್ತೀಚೆಗೆ ಸಂದರ್ಶನವೊಂದರಲ್ಲಿ ಪಾಲ್ಗೊಂಡಿದ್ದ ಅವರಿಗೆ, ‘ನೀವು ಆಡಿಷನ್‍ನಲ್ಲಿ ಯಾವತ್ತಾದರೂ ಫಜೀತಿಗೆ ಒಳಗಾಗಿದ್ದೀರಾ? ಆ ಪರಿಸ್ಥಿತಿಯನ್ನು ಹೇಗೆ ಎದುರಿಸಿದಿರಿ?” ಎಂಬ ಪ್ರಶ್ನೆ ಕೇಳಿದಾಗ ಅವರು ಇದರ ಕುರಿತು ಬಹಿರಂಗಪಡಿಸಿದ್ದಾರೆ.


ಸಲಿಂಗ ಕಾಮಿ ನಿರ್ದೇಶಕನೊಬ್ಬ ನಡೆಸಿದ್ದ ಆಡಿಷನ್‍ನಲ್ಲಿ ಆತ, ‘ನನಗೆ ನಿನ್ನ ಅದನ್ನು ತೋರಿಸು, ನಾನದನ್ನು ಫೀಲ್ ಮಾಡ್ಲಾ? ಎಂದು ಕೇಳಿದ್ದ. ಆಗ ನಾನು “ಏನ್ ಮಾತಾಡ್ತಿದೀರಿ, ಆರ್ ಯೂ ಸೀರಿಯಸ್?” ಎಂದು ಆತನಿಗೆ ಲಘುವಾಗಿ ಗದರಿದ್ದೆ. ಬಳಿಕ ಡೈಲಾಗ್ ಕೇಳಿದರೆ ಆ ನಿರ್ದೇಶಕ, ಇಂಡಸ್ಟ್ರಿಯಲ್ಲಿ ಹೇಗಿರಬೇಕು ಎಂಬ ಬಗ್ಗೆ ದೊಡ್ಡ ಭಾಷಣವನ್ನೇ ಮಾಡಿದ್ದ ಎಂದು ಆಯುಷ್ಮಾನ್ ಹೇಳಿದ್ದಾರೆ.


ಇನ್ನು ‘ವಿಕಿ ಡೋನರ್’ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದ ಆಯುಷ್ಮಾನ್, ಅದು ಬಿಡುಗಡೆಯಾದ ನಂತರ ತಾಯಿ ಜತೆ ಮಾಲ್‍ವೊಂದಕ್ಕೆ ಹೋಗಿದ್ದಾಗ ಯುವತಿಯೊಬ್ಬಳು ಆಯುಷ್ಮಾನ್ ಬಳಿ ಬಂದು ‘ವಿಕಿ.. ಐ ನೀಡ್ ಯುವರ್ ಸ್ಪರ್ಮ್’ಎಂದು ಕೇಳಿದ್ದಳಂತೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ನಟಿ ಅಮೂಲ್ಯಗೆ ಹುಟ್ಟುಹಬ್ಬದ ಸಂಭ್ರಮ