Publish Date: Fri, 14 Sep 2018 (15:40 IST)
Updated Date: Fri, 14 Sep 2018 (15:49 IST)
ಬೆಂಗಳೂರು : ಸ್ಯಾಂಡಲ್ ವುಡ್ ನಟಿ ಅಮೂಲ್ಯ ಶುಕ್ರವಾರ (ಇಂದು) ತಮ್ಮ ಹುಟ್ಟುಹಬ್ಬವನ್ನು ಮನೆಯವರ ಸಮ್ಮುಖದಲ್ಲಿ ಅದ್ದೂರಿಯಾಗಿ ಆಚರಿಸಿಕೊಂಡಿದ್ದಾರೆ.
ಗುರುವಾರ ಗೌರಿ-ಗಣೇಶ ಹಬ್ಬಕ್ಕೆಂದು ರಾಜರಾಜೇಶ್ವರಿ ನಗರದ ತಮ್ಮ ತವರು ಮನೆಗೆ ಬಂದ ನಟಿ ಅಮೂಲ್ಯ ಅಲ್ಲೇ ತಮ್ಮ ಪತಿ ಮನೆಯವರು ಮತ್ತು ಅಭಿಮಾನಿಗಳ ಮುಂದೆ ಕೇಕ್ ಕತ್ತರಿಸಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಅಂದು ಮಧ್ಯರಾತ್ರಿಯೇ ಅವರ ಅಮ್ಮ, ಅಣ್ಣ ಮತ್ತು ಕುಟುಂಬದ ಆಪ್ತರು ಕೇಕ್ ತಂದು ಕತ್ತರಿಸಿ ಶುಭಾಶಯವನ್ನು ತಿಳಿಸಿದ್ದಾರೆ. ಬೆಳಿಗ್ಗೆ ಅವರ ಪತಿ ಜಗದೀಶ್ ಮತ್ತು ಅತ್ತೆ, ಮಾವ ಎಲ್ಲರು ಕೇಕ್ ಕತ್ತರಿಸಿ ಶುಭಾ ಕೋರಿದ್ದಾರೆ.
ನಟಿ ಅಮೂಲ್ಯ ತಮ್ಮ ಹುಟ್ಟುಹಬ್ಬದ ಫೋಟೋಗಳನ್ನು ಕ್ಲಿಕ್ಕಿಸಿಕೊಂಡು ಅವುಗಳನ್ನು ತಮ್ಮ ಫೇಸ್‍ಬುಕ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಹಾಗೇ ಗೌರಿ-ಗಣೇಶ ಹಬ್ಬದ ಶುಭಾಶಯವನ್ನು ತಿಳಿಸಿ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ