Select Your Language

Notifications

webdunia
webdunia
webdunia
webdunia

ರಾಶಿ ರಾಶಿ ಮುಳ್ಳಿನ ಮೇಲೆ ಕುಣಿದ ಭಕ್ತರು

ರಾಶಿ ರಾಶಿ ಮುಳ್ಳಿನ ಮೇಲೆ ಕುಣಿದ ಭಕ್ತರು
ಚಾಮರಾಜನಗರ , ಬುಧವಾರ, 20 ಮಾರ್ಚ್ 2019 (14:33 IST)
ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಹಬ್ಬಗಳೇ ಹೀಗೆ… ವಿಶೇಷ ಆಚರಣೆಗಳು… ವಿಚಿತ್ರ ಸಂಪ್ರದಾಯಗಳು…  ಮೈಮೇಲೆ ಮಾರಮ್ಮ ಬರುತ್ತದೆಂದು ನಂಬಿದ ಭಕ್ತರು ಮುಳ್ಳಿನ ಪೊದೆಗಳ ಮೇಲೆ ಹಾರಿ ಭಕ್ತಿ ಪರಾಕಾಷ್ಠೆ ಮೆರೆದಿದ್ದಾರೆ.

ಚಾಮರಾಜನಗರ ತಾಲೂಕಿನ ಯಳಂದೂರು ಸಮೀಪದ ಗೂಳಿಪುರ ಎಂಬ ಊರಲ್ಲಿ ಪ್ರತಿ ವರ್ಷ ನಡೆಯುವ ಮಾರಮ್ಮನ ಹಬ್ಬದಂದು ಒಂದು ಸಮುದಾಯದ ಜನರು ಮುಳ್ಳಿನ ಪೊದೆಗಳಿಗೆ ಹಾರಿ ಭಕ್ತಿ ಮೆರೆಯುತ್ತಾರೆ.

ಗ್ರಾಮದ ಕುಂಟು ಮಾರಮ್ಮ ಹಾಗೂ ಬಿಸಿಲು ಮಾರಮ್ಮ ಗ್ರಾಮ ದೇವತೆಗಳ ಜಾತ್ರೆಯಲ್ಲಿ ರಾಶಿ-ರಾಶಿ ಇರುವ ಮುಳ್ಳಿನ ಪೊದೆಗಳಿಗೆ ಭಕ್ತರು ಹಾರಿ ಭಕ್ತಿ ಪರಾಕಷ್ಠೆ ಮೆರೆಯುತ್ತಾರೆ. ಅಂದ್ಹಾಗೆ, ಮೊದಲಿಗೆ ಮಾರಮ್ಮ ದೇವಿಯ ಮುಖ್ಯ ಅರ್ಚಕ ಮಾರಮ್ಮ ಆವಾಹನೆಯಾಗಿದ್ದಾಳೆಂದು ಮುಳ್ಳಿನ ಮೇಲೆ ಹಾರುತ್ತಾನೆ‌.

ಆ ಬಳಿಕ ಗ್ರಾಮದ ಹಲವು ಭಕ್ತರ ಮೈ ಮೇಲೆ ದೇವಿ ಕಾಣಿಸಿಕೊಂಡು ಓಡಿ ಮುಳ್ಳಿನ ಪೊದೆಗಳಿಗೆ ಹಾರುತ್ತಾರೆ. ಹೀಗೆ ಹಾರಿದ ಭಕ್ತರನ್ನು ಯುವಕರ ಗುಂಪೊಂದು ಮುಳ್ಳಿನ ಪೊದೆಯಿಂದ ಎತ್ತಿ ಹೊರತರುವುದು ಈ ಜಾತ್ರೆಯ ವಿಶೇಷ.




Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಾಗರಿಕ ಪೌರತ್ವ ಮಸೂದೆ ರದ್ದು- ರಾಹುಲ್ ಗಾಂಧಿ