Select Your Language

Notifications

webdunia
webdunia
webdunia
webdunia

ಸುಮಾರು 12 ಕೋಟಿ ಮೌಲ್ಯದ 1500 ಕೆ‌ಜಿ ಗಾಂಜಾ ಜಪ್ತಿ..!

1500 kg worth about 12 crores Confiscation of ganja
bangalore , ಭಾನುವಾರ, 16 ಜುಲೈ 2023 (20:00 IST)
ಬೆಂಗಳೂರಿನಲ್ಲಿ ಗಾಂಜಾ ಸರಬರಾಜು ಮಾಡುತ್ತಿದ್ದ ಸಲ್ಮಾನ್, ಆತನಿಗೆ ಗಾಂಜಾ ಪೂರೈಸುತ್ತಿದ್ದ ರಾಜಸ್ಥಾನ ಮೂಲದ ಚಂದ್ರಭಾನ್ ಬಿಷ್ಣೋಯಿ ಹಾಗೂ ಆಂಧ್ರಪ್ರದೇಶ ಮೂಲದ ಲಕ್ಷ್ಮಿ ಮೋಹನ್ ದಾಸ್ ಇವರೇ ಪ್ರಮುಖ ಆರೋಪಿಗಳು. ಇದರಲ್ಲಿ ಪ್ರಮುಖ ಆರೋಪಿಯಾಗಿರುವ ಚಂದ್ರಭಾನ್ ಬಿಷ್ಣೋಯಿ ಎಂಬಿಎ ವ್ಯಾಸಾಂಗ ಮಾಡಿದ್ದಾನೆ. ಲಕ್ಷ್ಮಿ ಮೋಹನ್ ದಾಸ್ ಬಿ.ಎ ಪದವೀಧರ. ಆದರೆ ಇಬ್ಬರೂ ಸಹ ಅಂತರ್ ರಾಜ್ಯ ಗಾಂಜಾ ಮಾರಾಟದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.. ಇತ್ತೀಚಿಗೆ ಬೆಂಗಳೂರಿನ ಚಾಮರಾಜಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಂಧಿತನಾಗಿದ್ದ ಸಲ್ಮಾನ್ ಎಂಬ ಆರೋಪಿಯನ್ನ ವಶಕ್ಕೆ ಪಡೆದಿದ್ದ ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದಾಗ ಅಂತರ್ ರಾಜ್ಯ ಮಾದಕ ಜಾಲ ಪತ್ತೆಯಾಗಿತ್ತು. ಬಳಿಕ ಆಂಧ್ರಪ್ರದೇಶದ ವಿಖಾಪಟ್ಟಣಂಗೆ ತೆರಳಿ ಮೂರು ವಾರಗಳ ಕಾಲ ಮಪ್ತಿಯಲ್ಲಿ ಕಾರ್ಯಾಚರಣೆ ನಡೆಸಿ ಇಬ್ಬರು ಪ್ರಮುಖ ಆರೋಪಿಗಳಾದ ಚಂದ್ರಭಾನ್ ಬಿಷ್ಣೋಯಿ ಹಾಗೂ ಲಕ್ಷ್ಮಿ ಮೋಹನ್ ದಾಸ್ ನನ್ನ ಬಂಧಿಸಿದ್ದಾರೆ.
 
ರಾಜಸ್ಥಾನ ನೊಂದಣಿಯ ಗೂಡ್ಸ್ ವಾಹನ ಹೊಂದಿದ್ದ ಆರೋಪಿಗಳು, ಗಾಂಜಾ ಸಾಗಿಸಲು ಸೂಕ್ತ ವ್ಯವಸ್ಥೆ ಸಿದ್ಧಪಡಿಸಿ ಕೊಂಡಿದ್ದರು. ವಾಹನಕ್ಕೆ ವಿವಿಧ ನಕಲಿ ನಂಬರ್ ಪ್ಲೇಟ್ ಬಳಸುತ್ತಿದ್ದರು. ಅಲ್ಲದೇ ಸಿನಿಮಾ ಮಾದರಿಯಲ್ಲಿ ವಾಹನದ ಗೂಡ್ಸ್ ಕಂಪಾರ್ಟ್ಮೆಂಟ್ ನ ಕೆಳಗಡೆ ಮತ್ತೊಂದು ಸೀಕ್ರೇಟ್ ಕಂಪಾರ್ಟ್ಮೆಂಟ್ ಮಾಡಿಸಿ ಕೊಂಡಿದ್ದರು. ಗಾಂಜಾ ಸಾಗಿಸುವಾಗ ಮೇಲಿನ ಗೂಡ್ಸ್ ಕಂಪಾರ್ಟ್ಮೆಂಟ್ ಭಾಗದಲ್ಲಿ ಪ್ಲಿಪ್ ಕಾರ್ಟ್ ಪಾರ್ಸೆಲ್ ಬಾಕ್ಸ್ ಗಳಲ್ಲಿಯೂ ಗಾಂಜಾ ಇರಿಸಿ ಸಾಗಿಸುತ್ತಿದ್ದುದು ಸಹ ತಿಳಿದು ಬಂದಿದೆ.. ಒಟ್ಟಿನಲ್ಲಿ ಇದೀಗ ಖತರ್ನಾಕ್ ಗಾಂಜಾ ಗ್ಯಾಂಗ್‌ನನ್ನು ಹಿಡಿಯುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗೃಹ ಲಕ್ಷ್ಮೀ ಯೋಜನೆ ಜಾರಿ ಯಾವಾಗ....!