Select Your Language

Notifications

webdunia
webdunia
webdunia
Friday, 28 March 2025
webdunia

ಮನೆಯಲ್ಲಿ ಗಂಡು ರಸ್ತೆಯಲ್ಲಿ ಹೆಣ್ಣು.....ಅವನು, ಅವಳಾಗಿ ಅವನಾದವನ ಕಥೆ

ಮನೆಯಲ್ಲಿ ಗಂಡು ರಸ್ತೆಯಲ್ಲಿ ಹೆಣ್ಣು.....ಅವನು, ಅವಳಾಗಿ ಅವನಾದವನ ಕಥೆ
ಬಾಗಲಗುಂಟೆ , ಭಾನುವಾರ, 16 ಜುಲೈ 2023 (18:30 IST)
ಹಣ ಸಂಪಾದನೆ ಮಾಡಲು ಜನ ಯಾವ , ಯಾವ ವೇಷ ಹಾಕ್ತಾರೆ ಅಂದ್ರೆ,ಮನೆಯಲ್ಲಿ ಗಂಡು ಬೀದಿಯಲ್ಲಿ ಹೆಣ್ಣಿನ ವೇಷ...ಐಷಾರಾಮಿ ಜೀವನಕ್ಕಾಗಿ ಹೆಣ್ಣಿನ ವೇಷ ಹಾಕುತ್ತಿದ್ದ ಐನಾತಿಯನ್ನ ಬಾಗಲಗುಂಟೆ ಠಾಣಾ ಪೊಲೀಸರು ಬಂಧಿಸಿದ್ದಾರೆ. ಹೆಂಡತಿ ಮಕ್ಕಳಿದ್ದರೂ ಬೀದಿಯಲ್ಲಿ ಮಂಗಳಮುಖಿ ವೇಷ ಧರಿಸಿ ಭಿಕ್ಷಾಟನೆಯಲ್ಲಿ ತೊಡಗಿದ್ದ ಚೇತನ್ ಎಂಬಾತನನ್ನ ಬಂಧಿಸಲಾಗಿದೆ. ಮದುವೆಯಾಗಿ ಪತ್ನಿ, ಮಕ್ಕಳಿದ್ದರೂ ಸಹ ಅಚ್ಚುಕಟ್ಟಾಗಿ ಜೀವನ ಮಾಡುವ ಬದಲು, ಐಷಾರಾಮಿ ಜೀವನದ ಗೀಳಿಗೆ ಬಿದ್ದಿದ್ದ ಆರೋಪಿ. ಹಣಕ್ಕಾಗಿ ಹೆಣ್ಣಿನ ವೇಷ ಹಾಕಿ ಬಿಕ್ಷಾಟನೆ ಮಾಡುತ್ತಿದ್ದ.ಮನೆಯಲ್ಲಿ ವಿಷಯ ಗೊತ್ತಾಗಬಾರದು ಅಂತ ಪ್ರತ್ಯೇಕವಾಗಿ ರೂಂ ಮಾಡಿಕೊಂಡಿದ್ದ. ಹಣಕ್ಕಾಗಿ ಹೆಣ್ಣಿನ ವೇಷ ಧರಿಸಿ ಮಂಗಳಮುಖಿಯರ ಸಲುಗೆ ಬೆಳೆಸಿಕೊಂಡು ಬಿಕ್ಷಾಟನೆ ಮಾಡುತ್ತಿದ್ದ. ನಾಗಸಂದ್ರ ಮೆಟ್ರೋ ನಿಲ್ದಾಣದ ಸುತ್ತಮುತ್ತ ದಿನನಿತ್ಯ ಬಿಕ್ಷಾಟನೆ ಮಾಡುತ್ತಿದ್ದ, ಹಣ ಕೊಡದಿದ್ರೆ ಬೆದರಿಕೆ ಹಾಕುತ್ತಿದ್ದ.  ಇತ್ತ ನಾಗಸಂದ್ರ ಮೆಟ್ರೋ ನಿಲ್ದಾಣದ ಜಾಗದಲ್ಲಿ ಆರೋಪಿ ಅಕ್ರಮವಾಗಿ ಶೆಡ್ ನಿರ್ಮಿಸಲು ಮುಂದಾದಾಗ ಜುಲೈ 13ರಂದು BMRCL ಅಧಿಕಾರಿಗಳು, ಸ್ಥಳಿಯರು ಪರಿಶೀಲನೆಗೆ ಮುಂದಾಗಿದ್ದರು. ಈ ವೇಳೆ ಗಲಾಟೆ ಮಾಡಿದ್ದ ಆರೋಪಿ ಸ್ಥಳೀಯ ಮಹಿಳೆಯೊಬ್ಬರ ಸೀರೆ ಎಳೆದಾಡಿ ವಿಕೃತಿ ಮೆರೆದಿದ್ದ. ಈ ವೇಳೆ ಚೇತನ್ ನನ್ನು ಹಿಡಿದ ಸ್ಥಳಿಯರು ಥಳಿಸಲು ಮುಂದಾದಾಗ ಅಸಲಿ ಕಹಾನಿ ಬಯಲಾಗಿತ್ತು. ನಂತರ ಬಾಗಲಗುಂಟೆ ಪೊಲೀಸರು ಆರೋಪಿಯನ್ನ ಬಂಧಿಸಿದ್ದು ಬಳಿಕ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಂಬರ್‌ಗ್ರಿಸ್ ವಂಚನೆ, ಮೂವರ ಬಂಧನ